ಸುಭಾಷಿತ :

Thursday, January 23 , 2020 5:58 PM

ನಿಮ್ಮ ಪ್ರೀತಿಯ ಸಹೋದರನಿಗೆ ‘ರಾಖಿ’ ಕಟ್ಟಲು ಶುಭ ವೇಳೆ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ


Thursday, August 15th, 2019 10:42 am


ಸ್ಪೆಷಲ್‌ಡೆಸ್ಕ್: ಸಹೋದರನಿಗೆ ರಕ್ಷಾಬಂಧನ ಕಟ್ಟುವ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.ಹೇಗೇಗೋ ಕಟ್ಟಿ ಅದನ್ನೇ ಸರಿ ಎಂದು ಭಾವಿಸಬಾರದು. ಅದನ್ನು ನಿಯಮದ ಪ್ರಕಾರವೇ ಮಾಡಿದರೆ ಮಾತ್ರ ಸರಿಯಾದ ಫಲ ಸಿಗಲು ಸಾಧ್ಯವಾಗುತ್ತದೆ.  ಸಹೋದರಿಯರು ಅಣ್ಣನ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಕರುಣಿಸೆಂದು ದೇವರಲ್ಲಿ ಕೇಳಿಕೊಳ್ಳುತ್ತಾಳೆ. ಈ ಸಮಯದಲ್ಲಿ ಮಂತ್ರವನ್ನು ಪಠಿಸಿ, ಕ್ರಮಪ್ರಕಾರವಾಗಿ ರಕ್ಷಾಬಂಧನ ಕಟ್ಟಬೇಕು.

ಈ ಮಂತ್ರ ಪಠಿಸಿ :
ಯೆನ್ ಬದ್ಧೋ ಬಲಿ ರಾಜ ದಾನವೇಂದ್ರೋ ಮಹಾಬಾಲ್
ತೇನ್ ತ್ವಮಾನುಬದ್ಧಾಮಿ ರಕ್ಷೆ ಮಾ ಚಲ್ ಮಾ ಚಲ್

ವಿಧಾನ : ರಕ್ಷಾಬಂಧನದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಬೇಕು. ನಂತರ ದೇವರಿಗೆ ಪೂಜೆ ಮಾಡಿ ದೇವರ ಮೂರ್ತಿಗೆ ದಾರ ಕಟ್ಟಬೇಕು. ನಂತರ ಸಹೋದರರನ್ನು ಕುಳ್ಳಿರಿಸಿ ಅವರಿಗೆ ಆರತಿ ಮಾಡಿ ತಿಲಕವನ್ನು ಹಣೆಗೆ ಹಚ್ಚಿ. ನಂತರ ಅವರ ಬಲ ಕೈಗೆ ರಕ್ಷಾ ದಾರವನ್ನು ಕಟ್ಟಿ ಮೇಲಿನ ಮಂತ್ರವನ್ನು ಪಠಿಸಬೇಕು.

‘ರಾಖಿ’ ಪವಿತ್ರ ದಾರ ಕಟ್ಟುವ ಶುಭ ಸಮಯ – ಬೆಳಗ್ಗೆ 05:53 ರಿಂದ ಸಂಜೆ 5: 58 ರವರೆಗೆ

ಅಪರಾಹ್ನ ಮುಹೂರ್ತ – ಮಧ್ಯಾಹ್ನ 1:43 ರಿಂದ 4: 20 ರವರೆಗೆ

ಹುಣ್ಣಿಮೆ ತಿಥಿ ಆರಂಭ – ಆಗಸ್ಟ್ 14 ಮಧ್ಯಾಹ್ನ 3: 45 ಕ್ಕೆ

ಹುಣ್ಣಿಮೆ ತಿಥಿ ಅಂತ್ಯ – ಆಗಸ್ಟ್ 15 ಸಂಜೆ 5: 58ಕ್ಕೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions