`ನೋಟ್ ಬ್ಯಾನ್’ ವೇಳೆ ಮೋದಿ ಕ್ಯಾಬಿನೆಟ್ ನ ಎಲ್ಲಾ ಸಚಿವರನ್ನೂ ಕೂಡಿ ಹಾಕಿದ್ದರು : ರಾಹುಲ್ ಗಾಂಧಿ ಹೊಸ ಬಾಂಬ್!


Saturday, May 18th, 2019 11:17 am

ಶಿಮ್ಲಾ : ದೇಶದಲ್ಲಿ ನೋಟುಗಳ ಅಮಾನ್ಯೀಕರಣ ತೀರ್ಮಾನ ಘೋಷಣೆ ಮಾಡುವ ಮುನ್ನ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್ ನಲ್ಲಿರುವ ಎಲ್ಲಾ ಸಚಿವರನ್ನು ಕೂಡಿ ಹಾಕಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ದೇಶದ ಮೇಲೆ ನೋಟುಗಳ ಅಮಾನ್ಯೀಕರಣದಂತಹ ಕಠಿಣ ನಿಲುವನ್ನು ಹೇರುವ ಮೊದಲು ತಮ್ಮ ಕ್ಯಾಬಿನೆಟ್ ನಲ್ಲಿನ ಎಲ್ಲಾ ಸಚಿವರನ್ನು ಪ್ರಧಾನಿ ಮಂತ್ರಿಗಳ ಮನೆಯಿರುವ ದೆಹಲಿ ರೇಸ್ ಕೋರ್ಟ್ ರಸ್ತೆಯಲ್ಲಿರುವ ಒಂದು ಕಟ್ಟಡದಲ್ಲಿ ಕೂಡಿ ಹಾಕಿದ್ದರು ಎಂಬುದು ಸತ್ಯ ಎಂದು ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ.

ನೋಟ್ ಬ್ಯಾನ್ ಸಂದರ್ಭದಲ್ಲಿ ಕ್ಯಾಬಿನೆಟ್ ದರ್ಜೆಯ ಎಲ್ಲಾ ಸಚಿವರನ್ನು ಕೂಡಿ ಹಾಕಲಾಗಿತ್ತು. ಈ ಸಂದರ್ಭದಲ್ಲಿ ವಿಶೇಷ ರಕ್ಷಣಾ ದಳದ ಅಧಿಕಾರಿಗಳೇ ಸಚಿವರಿಗೆ ರಕ್ಷಣೆ ನೀಡಿದ್ದು, ಅವರೇ ನನಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions