`ಲೋಕಸಮರ ಫಲಿತಾಂಶ’ದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?


Saturday, May 18th, 2019 10:30 am

ನವದೆಹಲಿ : ಮೇ.23 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟವಾಗುವ ಮುನ್ನ ಸಂಖ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ದೇಶದ ಜನರ ತೀರ್ಮಾನಕ್ಕೆ ಮೊದಲೇ ನಾನು ತೀರ್ಪು ಕೊಡುವುದಿಲ್ಲ. ಜನರು ನೀಡುವ ಆದೇಶ ಆಧರಿಸಿ ನಾವು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿಯನ್ನು ತಡೆಯಲು ಲಕ್ಷಾಂತರ ಜನರು ನನ್ನ ಜೊತೆಗೆ ನಿಂತರು ಎನ್ನುವ ಖುಷಿಯಿದೆ. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಸರ್ಕಾರದಿಂದ ರಕ್ಷಿಸಲು ಯಶಸ್ವಿ ಹೋರಾಟ ನಡೆಸಿದ್ದೇವೆ. ಪ್ರತಿಪಕ್ಷವಾಗಿ ನಾವು ಎ-ಗ್ರೇಡ್ ಕೆಲಸ ಮಾಡಿದ್ದೇವೆ. ಬಿಜೆಪಿಗೆ ಉತ್ತಮ ಸ್ಪರ್ಧೆ ನೀಡಿದ್ದೇವೆ. ಹೀಗಾಗಿ ಜಾತ್ಯತೀತ ಮೈತ್ರಿಕೂಟಕ್ಕೆ ಈ ಬಾರಿ ಹೆಚ್ಚಿನ ಸೀಟು ದೊರೆಯಲಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಮೋದಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಿದ್ದೇವೆ. ಈ ಮೂಲಕ ಮೋದಿಯ ಬಾಗಿಲನ್ನು ಶೇ. 90 ರಷ್ಟು ಮುಚ್ಚಿದ್ದೇವೆ. ಉಳಿದ 10 ರಷ್ಟು ಮೋದಿಯೇ ಸ್ವಯಂಕೃತ ಅಪರಾಧಗಳಿಂದ ಮುಚ್ಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions