ಗುಳಿಕೆನ್ನೆ ಚೆಲುವೆಗೆ ತಾತನಾಗಲಿದ್ದಾರೆ ನಟ ಅನಂತ್ ನಾಗ್..!


Monday, November 19th, 2018 7:45 pm

ಸಿನಿಮಾ ಡೆಸ್ಕ್ : ಶಿವಲಿಂಗ ಖ್ಯಾತಿಯ ನಿರ್ದೇಶಕ ಪಿ ವಾಸು ನಟ ಶಿವರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡುತ್ತಿದ್ದು., ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ದ್ವಾರಕೀಶ್ ಬ್ಯಾನರ್ ನ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದು, ಸಿನಿಮಾಗೆ ಆನಂದ್ ಎಂಬ ಟೈಟಲ್ ಇಡಲಾಗಿದ್ದರೂ ಕೂಡ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಈ ಸಿನಿಮಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ, ಈಗ ಚಿತ್ರದ ಪ್ರಮುಖವಾದ ರಚಿತಾ ತಾತನ ಪಾತ್ರಕ್ಕೆ ಅನಂತ್ ನಾಗ್ ಎಂಟ್ರಿ ಕೊಟ್ಟಿದ್ದಾರಂತೆ. ಹಿರಿಯ ನಟ ಅನಂತ್ ನಾಗ್ ಈಗಾಗಲೇ ಹಲವು ಪಾತ್ರಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಹೊಸ ಚಿತ್ರದಲ್ಲಿ ಅನಂತ್ ನಾಗ್ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions