ಅ.5 ರಂದು ‘ನಟ ಸಾರ್ವಭೌಮ’ ತೆರೆಗೆ


Sunday, July 22nd, 2018 8:51 pm

ಸಿನಿಮಾಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ನಟ ಸಾರ್ವಭೌಮ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 

ಈಗಾಗಲೇ ನಟ ಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.  ಮುಂದಿನ ಒಂದು ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ. ಆ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ, ಆಕ್ಟೋಬರ್ 5 ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

ಇನ್ನು ನಟಸಾರ್ವಭೌಮ ಚಿತ್ರಕ್ಕೆ ಪವನ್ ಒಡೆಯರ್ ಕಥೆ ಮತ್ತು ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶಿಸುತ್ತಿದ್ದಾರೆ. ಪುನೀತ್ ಗೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಚಿತ್ರಕ್ಕೆ ವೈದಿ ಛಾಯಾಗ್ರಹಣ, ಇಮಾನ್ .ಡಿ. ಸಂಗೀತವಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions