ಸುಭಾಷಿತ :

Saturday, October 19 , 2019 4:34 PM

ಟೊರೆಂಟೋ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ‘ಕಣ್ಣೀರು ಹಾಕಿದ್ಯಾಕೆ’..?


Saturday, September 14th, 2019 5:24 pm

ನ್ಯೂಸ್ ಡೆಸ್ಕ್ : ಟೊರೆಂಟೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಛೋಪ್ರಾ ಭಾವೋದ್ವೇಗಕ್ಕೆ ಒಳಗಾದ ಪ್ರಸಂಗ ನಡೆದಿದೆ. ಟೊರೆಂಟೋದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಿಯಾಂಕಾ ಅಭಿನಯದ ‘ದಿ ಸ್ಕೈ ಈಸ್ ಪಿಂಕ್ ‘ಚಿತ್ರದ ಪ್ರದರ್ಶನ ನಡೆದಿದ್ದು, ಈ ವೇಳೆ, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಪ್ರಿಯಾಂಕಾ ಗಾಂಧಿ ಭಾವೋದ್ವೇಗಕ್ಕೆ ಒಳಗಾಗಿ ನಿರ್ದೇಶಕಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

‘ದಿ ಸ್ಕೈ ಈಸ್ ಪಿಂಕ್ ‘ಚಿತ್ರದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ, ಫರ್ಹಾನ್ ಅಕ್ತರ್ , ದಂಗಲ್ ಖ್ಯಾತಿಯ ಜೈರಾ ವಾಸಿಂ ಮುಖ್ಯಭೂಮಿಕೆಯಲ್ಲಿದ್ದಾರೆ. ಸೋನಾಲಿ ಬೋಸ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿಕ್ಕಂದಿನಲ್ಲೇ ಅಪರೂಪದ ಖಾಯಿಲೆಗೆ ತುತ್ತಾದರೂ, 15 ವರ್ಷಕ್ಕೆ ವಾಗ್ಮಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಆಯಿಷಾ ಚೌದರಿಅವರ ಜೀವನವೇ ಈ ಚಿತ್ರಕ್ಕೆ ಕಥಾವಸ್ತುವಾಗಿದೆ.

ಇನ್ನು ‘ದಿ ಸ್ಕೈ ಈಸ್ ಪಿಂಕ್ ‘ಚಿತ್ರ ಅಕ್ಟೋಬರ್ 11ರಂದು ರಿಲೀಸ್ ಆಗಲಿದ್ದು, ಈಗಾಗಲೇ ಟ್ರೈಲರ್ ನಿಂದಲೇ ಹೆಚ್ಚು ಮೆಚ್ಚುಗೆ ಗಳಿಸಿದೆ. ನಿನ್ನೆ ಟೊರೆಂಟೋದಲ್ಲಿ ನಡೆದ ಚಿತ್ರ ಪ್ರದರ್ಶನದ ವೇಳೆ, ನಟಿ ಪ್ರಿಯಾಂಕಾ ಬಿಳಿ ಹಾಗೂ ಕಪ್ಪು ಬಣ್ಣದ ಗೌನ್ ನಲ್ಲಿ ಫುಲ್ ಮಿಂಚಿದ್ದು, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಭಾವೋದ್ವೇಗಕ್ಕೆ ಒಳಗಾದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions