ಸುಭಾಷಿತ :

Monday, September 23 , 2019 3:54 PM

ಪ್ರಭಾಸ್ ಅಭಿಮಾನಿಗಳಿಗೆ ಇಲ್ಲಿದೆ `ಸರ್ಪ್ರೈಸ್’!


Tuesday, May 21st, 2019 1:10 pm

ಸಿನಿಮಾಡೆಸ್ಕ್ : ಬಾಹುಬಲಿ ಚಿತ್ರದ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಸಾಹೋ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್ ಈ ಚಿತ್ರದ ಪೋಸ್ಟರ್ ನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪ್ರಭಾಸ್ ಸಾಹೋ ಚಿತ್ರದ ಪೋಸ್ಟರ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು,`ಎಲ್ಲಾ ಡಾರ್ಲಿಂಗ್ಸ್ ಗೆ ಇಲ್ಲಿದೆ ಸರ್ಪ್ರೈಸ್, ನನ್ನ ಮುಂದಿನ ಸಾಹೋ ಚಿತ್ರದ ಅಧಿಕೃತ ಪೋಸ್ಟರ್, ಅಗಸ್ಟ್ 15 ರಂದು ನಿಮ್ಮನ್ನು ಚಿತ್ರದ ಮೂಲಕ ಭೇಟಿ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಪ್ರಭಾಸ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಪ್ರಭಾಸ್, ಹಾಯ್ ಡಾರ್ಲಿಂಗ್ಸ್, ಹೇಗಿದ್ದೀರಾ? ನಾಳೆ ಒಂದು ಸರ್ಪ್ರೈಸ್ ಇದೆ. ನಾಳೆ ನನ್ನ ಇನ್ ಸ್ಟಾಗ್ರಾಮ್ ಚೆಕ್ ಮಾಡಿ, ಐ ಲವ್ ಯೂ ಎಂದು ಹೇಳಿದ್ದರು.

ಇನ್ನು ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶ ಮಾಡುತ್ತಿದ್ದು, ವಂಶಿ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನೀಲ್ ನಿತಿನ್ ಮುಖೇಶ್, ಮಂದಿರ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

https://www.instagram.com/p/BxtvQpgnlBQ/?utm_source=ig_web_copy_link

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions