ಸುಭಾಷಿತ :

Monday, September 23 , 2019 3:54 PM

ಆನ್​ಲೈನ್​ ಜಾಹೀರಾತಿಗಾಗಿ ರಾಜಕೀಯ ಪಕ್ಷಗಳಿಂದ ಬರೋಬ್ಬರಿ 26.6 ಕೋಟಿ ರೂ ವೆಚ್ಚ! ಬಿಜೆಪಿಯದ್ದೇ ಸಿಂಹಪಾಲು!


Monday, May 20th, 2019 8:06 am


ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರ ನಡೆಸಿದ ರಾಜಕೀಯ ಪಕ್ಷಗಳು, ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಲು 53 ಕೋಟಿ ರೂ. ಖರ್ಚು ಮಾಡಿವೆ ಎನ್ನಲಾಗಿದ್ದು, ಈ ಪೈಕಿ ಫೇಸ್​ಬುಕ್​ನಲ್ಲಿ ಬಿಜೆಪಿ ‘My First Vote for Modi’, ‘Bharat Ke Mann Ki Baat’ ‘Nation with NaMo’ ಪೇಜ್​ಗಳ ಮೂಲಕ 2,500 ಜಾಹೀರಾತು ನೀಡಿದ್ದು, ಇದಕ್ಕಾಗಿ 4.23ಕೋಟಿ ರೂ ವ್ಯಯಿಸಿದೆ. ಗೂಗಲ್​ ಜಾಹೀರಾತಿಗಾಗಿ 17 ಕೋಟಿ ರೂ ಖರ್ಚು ಮಾಡಿ, ಎಲ್ಲ ಪಕ್ಷಗಳಿಗಿಂತ ಮೊದಲ ಸ್ಥಾನದಲ್ಲಿದೆ.

ಫೆಬ್ರವರಿಯಿಂದ ಮೇ ವರೆಗೆ ರಾಜಕೀಯ ಪಕ್ಷಗಳು ಬರೋಬ್ಬರಿ 26.6 ಕೋಟಿ ರೂ. ವೆಚ್ಚ ಮಾಡಿದ್ದು. ಇದುವರೆಗೂ 1.21 ಲಕ್ಷ ಜಾಹೀರಾತುಗಳನ್ನ ಫೇಸ್​ಬುಕ್ ಮೂಲಕ ಹಾಗೂ ಗೂಗಲ್​, ಯೂಟ್ಯೂಬ್​ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ 14,837 ರಾಜಕೀಯ ಜಾಹೀರಾತುಗಳನ್ನು ನೀಡಿವೆ ಎನ್ನಲಾಗಿದೆ.

ಕಾಂಗ್ರೆಸ್​ ಫೇಸ್​ಬುಕ್​ನಲ್ಲಿ 3,686 ಜಾಹೀರಾತುಗಳಿಗಾಗಿ 1.46 ಕೋಟಿ ರೂ ಖರ್ಚು ಮಾಡಿದೆ. ಗೂಗಲ್​ನಲ್ಲಿ 2.71 ಕೋಟಿ ರೂ ನೀಡಿ 425 ಜಾಹೀರಾತು ನೀಡಿದೆ. ತೃಣಮೂಲ ಕಾಂಗ್ರೆಸ್​ 29.29 ಲಕ್ಷ ಜಾಹೀರಾತಿಗಾಗಿ ವ್ಯಯಿಸಿದೆ. ಆಮ್​ ಆದ್ಮಿ ಪಕ್ಷ 13.62 ಲಕ್ಷ ಖರ್ಚು ಮಾಡಿ 176 ಜಾಹೀರಾತು ನೀಡಿದೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions