ದೇಶ ಕಾಯುವ ಯೋಧನ ಕುಟುಂಬಕ್ಕೆ ಮೈಸೂರು ಪೋಲಿಸರಿಂದ ದೌರ್ಜನ್ಯ!?
Wednesday, July 4th, 2018 10:05 am
ಮೈಸೂರು: ನಾನು ದೇಶ ಕಾಯಲು ಹೋಗಿದ್ದೇನೆ, ಆದರೆ ನನ್ನ ಕುಟುಂಬಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈಗಾಲಾದರು ನಮಗೇ ನ್ಯಾಯ ಕೊಡಿಸಿ ಎಂದು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ನಿವಾಸಿಯಾಗಿದ್ದ ಯೋಧರೊಬ್ಬರು ಮನವಿ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ವಾಸಿಸುವ ಯೋಧ ಮಂಜುನಾಥ್ ಅವರು ತನ್ನ ತಂದೆ ಮೇಲೆ ಕೆಲವರು ಜನರು ವಿನಾಃಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಪಘಾತ ಮಾಡಿದವರ ಕಡೆಯವರೆ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದಾರೆ. ಆದರೂ ಪೊಲೀಸರು ಈವರೆಗೂ ತಪ್ಪು ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ನಾನು ಕರ್ತವ್ಯದಲ್ಲಿದ್ದು, ನಾನು ಮನೆಯಲ್ಲಿ ಇರುವುದಿಲ್ಲ. ದೇಶ ಕಾಯೋ ನಮಗೆ ನಮ್ಮ ತಂದೆಗೆ ಆದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ತನ್ನ ತಂದೆ ಆರೋಗ್ಯ ಸರಿ ಇರದ ಕಾರಣ ರಜೆ ಹಾಕಿ ಊರಿಗೆ ಬಂದಿರುವ ಯೋಧ ಮಂಜುನಾಥ್ ನಮಗೆ ಅನ್ಯಾಯವಾಗಿದೆ, ಘಟನೆ ನಡೆದ ನಂತರ ಪೋಲಿಸರು ಸರಿಯಾಗಿ ತನಿಖೆ ನಡೆಸದೇ ನಮ್ಮ ವಿರುದ್ದ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ನಮ್ಮ ತಂದೆ ಈಗ ಯಾರನ್ನು ಸಹ ಗುರುತು ಹಿಡಿಯುತ್ತಿಲ್ಲ ಅಂತ ಆರೋಪಿಸಿದ್ದಾರೆ.