‘ಆರೆಂಜ್’ ಸವಿದ ಸಿನಿರಸಿಕರು ಫುಲ್ ಖುಷ್…ಮೈಸೂರಿನಲ್ಲಿ ಹೌಸ್ ಫುಲ್ ಪ್ರದರ್ಶನ


Monday, December 10th, 2018 7:33 pm

ಸಿನಿಮಾಡೆಸ್ಕ್: ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಆರೆಂಜ್’ ಸಿನಿಮಾಕ್ಕೆ ರಾಜ್ಯಾದ್ಯಂತ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲೂ ಆರೆಂಜ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಇಂದು ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ನಿರ್ಮಾಪಕ ಸೇರಿದಂತೆ ಚಿತ್ರತಂಡ ಗಾಯತ್ರಿ ಚಿತ್ರಮಂದಿರಕ್ಕೆ ವಿಸಿಟ್ ಕೊಟ್ಟಿದೆ. ಆದರೆ ನಟ ಗಣೇಶ್ ಮಾತ್ರ ಮಿಸ್ ಆಗಿದ್ರು.

ಡಿಸೆಂಬರ್ 7 ರಂದು ತೆರೆಕಂಡಿದ್ದ ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿದೆ ಎಂದಿನಂತೆ ತಮ್ಮ ಮ್ಯಾನರಿಸ್ ನಿಂದ ಗಣೇಶ್ ಕಾಮಿಡಿ ಕಚಗುಳಿ ಇಟ್ಟಿದ್ದಾರೆ., ಹಾಸ್ಯ ನಟ ಸಾಧು ಕೋಕಿಲ ಕಾಮಿಡಿ ಸಿನಿರಸಿಕರನ್ನು ರಂಜಿಸಿದೆ.

ರಾಜಕುಮಾರ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದ ಪ್ರಿಯಾ ಆನಂದ್ ಗಣೇಶ್ ಅಭಿನಯದ ಆರೆಂಜ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈ ದಳಪತಿ ಖ್ಯಾತಿಯ ನಿರ್ದೇಶಕ ಪ್ರಶಾಂತ್ ಆರೆಂಜ್ ​​​ ಸಿನಿಮಾವನ್ನು ನಿದೇರ್ಶಿಸಿದ್ದಾರೆ. ಸಿನಿಮಾದಲ್ಲಿ ಸಾಧುಕೋಕಿಲ, ರಂಗಾಯಣ ರಘು, ಪದ್ಮಜಾ ರಾವ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಗ್ರಹಣ ಮತ್ತು ಎಸ್.ಎಸ್. ಥಮನ್ ಸಂಗೀತ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions