ಆಂಧ್ರದಲ್ಲಿ ‘ಅಣ್ಣಾ ಕ್ಯಾಂಟೀನ್’ ಉದ್ಘಾಟಿಸಿದ ನಾಯ್ಡು : 5 ರೂ.ಗೆ 1ಪ್ಲೇಟ್ ಊಟ


Thursday, July 12th, 2018 7:51 pm

ನ್ಯೂಸ್ ಡೆಸ್ಕ್ : ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೊಸ ಕ್ಯಾಂಟೀನ್ ಆರಂಭಿಸಿದ್ದಾರೆ, 

ನಾಯ್ಡು ಅವರು ‘ಅಣ್ಣಾ ಕ್ಯಾಂಟೀನ್’ನನ್ನು ವಿಜಯವಾಡದಲ್ಲಿ ಉದ್ಘಾಟಿಸಿದ್ದು, ಪ್ರತಿದಿನ ಒಟ್ಟು 2 ಲಕ್ಷ ಮಂದಿಗೆ ಈ ಕ್ಯಾಂಟೀನ್‌ಗಳಲ್ಲಿ ಊಟ ಲಭ್ಯವಿದೆ.

ಅಂದಹಾಗೆ, ಒಂದು ಪ್ಲೇಟ್ ಊಟಕ್ಕೆ 5 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಇಲ್ಲಿ ನೀಡಲಾಗುತ್ತದೆ.ರಾಜ್ಯದಾದ್ಯಂತ 110 ನಗರಸಭೆಗಳಲ್ಲಿ 143 ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದೆ. 2014ರ ತೆಲುಗು ದೇಶಂನ ಚುನಾವಣಾ ಪ್ರಣಾಳಿಕೆ ಪ್ರಕಾರ ‘ಅಣ್ಣಾ ಕ್ಯಾಂಟೀನ್’ ಆರಂಭಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions