ಬಿಗ್ ಬ್ರೇಕಿಂಗ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಶಂಕಿತ ಆರೋಪಿ ಬಂಧನ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ


Friday, February 23rd, 2018 10:34 pm

ಬೆಂಗಳೂರು :  ಬೆಂಗಳೂರು: ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಎಸ್ಐಟಿ ವಶದಲ್ಲಿದ್ದಾನೆಂದು ಹೇಳಲಾಗುತ್ತಿದೆ. 

ಸೆಪ್ಟಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಡ್ಯ ಮದ್ದೂರು ಮೂಲದ ಹೊಟ್ಟೆ ಮಂಜ ಆಲಿಯಾಸ್, ಕೆಟಿ ನವೀನ ಪೊಲೀಸರ ಕೈಗೆ ಸಿಕ್ಕ ಶಂಕಿತ ಎಂದು ತಿಳಿದು ಬಂದಿದೆ. ಆದ್ರೆ ಪೊಲೀಸರು ಈ ಬಗ್ಗೆ ಯಾವುದನ್ನೂ ದೃಢ ಪಡಿಸಿಲ್ಲ. ತನಿಖೆಯ ಹಂತದಲ್ಲಿ ಹಲವಾರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಅಂತ ಹೇಳಲಾಗುತ್ತಿದೆ.

ಹಾಗೇ ಮಂಡ್ಯ ಮೂಲದ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಂಕಿತನ ರೇಖಾ ಚಿತ್ರ ಮತ್ತು ಈ ವ್ಯಕ್ತಿಗೆ ಸಾಮ್ಯತೆ ಕಂಡು ಬಂದಿದೆ. ಸಿಸಿಟಿವಿಯಲ್ಲಿ ದಾಖಲಾದ ವ್ಯಕ್ತಿಯಂತೆ ಈ ವ್ಯಕ್ತಿ ಕಾಣಿಸುತ್ತಿದ್ದಾನೆ. ಜೊತೆಗೆ ಈತನ ಚಲನವಲನ ಅನುಮಾನ ಮೂಡಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ ಐ ಟಿ ಮೂಲಗಳು ಹೇಳಿವೆ.

ಆದ್ರೆ ಕೆಲವೊಂದು ಮಾಧ್ಯಮಗಳ ವರದಿ ಪ್ರಕಾರ ಪೊಲೀಸರು ಕೆಟಿ ನವೀನನನ್ನು ನಾಲ್ಕು ದಿನಗಳ ಹಿಂದೆಯೇ ವಶಕ್ಕೆ ಪಡೆದಿದ್ದಾರೆ. ಹಿಂದೂ ಯುವ ಸೇನೆಯ ಮುಖಂಡನಾಗಿರುವ ಕೆಟಿ ನವೀನನಿಗೆ ಗೌರಿ ಲಂಕೇಶ್ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ಉತ್ತರ ಭಾರತದಿಂದ ಶೂಟರ್ ಗಳನ್ನು ತರಿಸಿ ಈ ಕೃತ್ಯ ಮಾಡಿಸಿದ್ದಾನೆ.

ಇದಕ್ಕೂ ಮುನ್ನ ಕೊಳ್ಳೆಗಾಲದ ತೋಟದಲ್ಲಿ ಕಿಲ್ಲರ್ ಗಳಿಗೆ ಊಟ ವ್ಯವಸ್ಥೆ ಮಾಡಿ ತರಬೇತಿಯನ್ನೂ ನೀಡಿದ್ದನಂತೆ. ಜೊತೆಗೆ ಕೆ.ಟಿ. ನವೀನ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು, ಕೊಲೆಗೆ ಮೊದಲು ಸ್ಥಳ ಪರಿಶೀಲನೆ ಮಾಡಿಯೇ ಈ ಕೃತ್ಯ ನಡೆಸಲು ನಿರ್ಧರಿಸಿದ್ದನಂತೆ ನವೀನ.

ಜೊತೆಗೆ ಗೌರಿ ಹತ್ಯೆಗೆ ಮಂಗಳೂರು ಲಿಂಕ್ ಇದೆ ಎಂದು ಖಾಸಗಿ ಮಾಧ್ಯಮ ವರದಿಗಳು ತಿಳಿಸಿದ್ದು, ಗೌರಿ ಹತ್ಯೆಗೆ ಹಂತಕರನ್ನು ಪರಿಚಯಿಸಿದ್ದು ಮಂಗಳೂರಿನ ವ್ಯಕ್ತಿಯಂತೆ. ಆದರೆ ಪೊಲೀಸರು ಇನ್ನೂ ಬಂಧನವನ್ನು ಧೃಡೀಕರಿಸಿಲ್ಲ.

ಈ ಕುರಿತು ನಮ್ಮ ನ್ಯೂಸ್ ನೌ ವೆಬ್ ಸೈಟ್ ಡಿಸಿಪಿ ಅನುಚೇತನ್ ಸಂಪರ್ಕಿಸಿ ಸ್ಪಷ್ಟನೆ ಕೇಳಿತು. ಸಮಯ 8.11pm ಗೆ ಈ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿ ಯಾರನ್ನು ಬಂಧಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ ನಂಬರ್ಹ ಸುದ್ದಿ ಮೂಲಗಳ ಪ್ರಕಾರ, ನಾಲ್ಕು ದಿನಗಳ ಹಿಂದೆಯೇ ಬಂಧಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಬಂಧಿತ ಆರೋಪಿಗಳ ಬಗೆಗಿನ ಮಾಹಿತಿಯನ್ನು ಗೌಪ್ಯವಾಗಿ ಇಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಮುಂದಾಗಿದ್ದು, ತನಿಖೆ ಮುಗಿದ ಬಳಿಕ ಖುದ್ದು ಗೃಹ ಸಚಿವರು ಈ ಬಗ್ಗೆ ಮಾಹಿತಿ ನೀಡಲು ಮುಚ್ಚಿಡಲಾಗಿತ್ತು ಎನ್ನಲಾಗುತ್ತಿದೆ. ಈ ಮಾತಿಗೆ ಅವರು ಮೊನ್ನೆ ಸದನಲ್ಲಿ ಗೌರಿಲಂಕೇಶ್ ಅವರ ಹತ್ಯೆಗೆ ಸಂಬಂಧಪಟ್ಟಂತೆ ಹೇಳಿರುವ ಮಾತು ಸಾಕ್ಷಿಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions