ಆಯ್ಲಿ ತ್ವಚೆಯನ್ನು ಸಂಪೂರ್ಣವಾಗಿ ನಿವಾರಿಸಿ ಹೊಳೆಯುವ ಮೈಕಾಂತಿ ನಿಮ್ಮದಾಗಿಸಿ


Thursday, June 14th, 2018 8:19 pm

ನಿಮ್ಮ ತ್ವಚೆ ಅಯ್ಲಿಯಾಗಿದ್ದರೆ ಅದರಷ್ಟು ಇರಿಟೇಟ್ ಆಗುವಂತಹ ವಿಷಯ ಬೇರೆ ಯಾವುದು ಇರಲು ಸಾಧ್ಯವಿಲ್ಲ. ಎಷ್ಟೇ ಮೇಕಪ್ ಮಾಡಿಕೊಂಡರು ಸಹ ಆಯ್ಲಿ ತ್ವಚೆಯಿಂದಾಗಿ ಮೇಕಪ್ ಕರಗಿ ಹೋಗುತ್ತದೆ. ಹಾಗಾದರೆ ಇಂತಹ ತ್ವಚೆಯ ನಿವಾರಣೆ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಆದ ಟಿಪ್ಸ್….

ಟೊಮೇಟೊ : ಇದು ಮುಖದ ಮೇಲೆ ಕ್ಲೇಸ್ನರ್ ನಂತೆ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಟೊಮೇಟೊ ರಸ ತೆಗೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖವನ್ನು ಚೆನ್ನಾಗಿ ತೊಳೆಯಬೇಕು.

ಸೇಬು : ಇದು ಕೇವಲ ಪೌಷ್ಟಿಕ ಹಣ್ಣು ಮಾತ್ರವಲ್ಲ ಎಣ್ಣೆಯುಕ್ತ ಸ್ಕಿನ್ ಗೆ ಬೆಸ್ಟ್ ರೆಮೆಡಿ ಕೂಡಾ ಆಗಿದೆ. ಸೇಬನ್ನು ತುರಿದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಇದನ್ನು ವಾರದಲ್ಲಿ ಮೂರೂ ಬಾರಿ ಮಾಡಬೇಕು.

ಸೌತೆಕಾಯಿ : ಇದು ತ್ವಚೆಯ ರಕ್ಷಣೆಗೆ ಸಹಕಾರಿ. ಸೌತೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಮುಖಕ್ಕೆ ರಬ್ ಮಾಡಿ. ನಂತರ ನೀರಿನಿಂದ ಮುಖ ತೊಳೆಯಿರಿ. ಇದರ ರಸ ತೆಗೆದು ಕೂಡ ಮುಖಕ್ಕೆ ಹಚ್ಚಬಹುದು.

ಪಪ್ಪಾಯಿ : ಇದು ಬೆಸ್ಟ್ ನ್ಯಾಚುರಲ್ ಕಲೆ ನಿವಾರಕವಾಗಿದೆ. ಪಪ್ಪಾಯದ ತುಂಡನ್ನು ತೆಗೆದುಕೊಂಡು ಮುಖಕ್ಕೆ ಚೆನ್ನಾಗಿ ಉಜ್ಜಿ. ೧೦ ನಿಮಿಷದ ಬಳಿಕ ವಾಶ್ ಮಾಡಿ.

ಕಿತ್ತಳೆ : ಇದರಲ್ಲಿ ನ್ಯಾಚುರಲ್ ಆಂಟಿ ಆಕ್ಸಿಡೆಂಟ್ ಪ್ರಾಪರ್ಟಿ ಇದೆ. ಇದು ಮುಖದಲ್ಲಿರುವ ಎಣ್ಣೆಯ ಅಂಶವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆಯ ಸಿಪ್ಪೆಯನ್ನು ಮಿಕ್ಸಿ ಮಾಡಿ ಅದಕ್ಕೆ ಕಿತ್ತಳೆ ರಸ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ ೧೫ ನಿಮಿಷದ ನಂತರ ತೊಳೆಯಿರಿ.

ನಿಂಬೆ : ನಿಂಬೆ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನೀರು ಸೇರಿಸಿ ಮುಖಕ್ಕೆ ಚೆನ್ನಾಗಿ ಉಜ್ಜಿ ಮಸಾಜ್ ಮಾಡಿ. ೫ ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ

ಅಲೋವೆರಾ: ಅಲೋವೆರಾದ ಜೆಲ್ ತೆಗೆದುಕೊಂಡು ಮುಖಕ್ಕೆ ಹಚ್ಚಿ. ಒಣಗಿದ ನಂತರ ಉಗುರುಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions