ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ ಹೊಟ್ಟೆ ತುಂಬಿಸುವ ಓಟ್ಸ್ ನ್ನು ಹೀಗೂ ಬಳಕೆ ಮಾಡಬಹುದು


Friday, December 7th, 2018 12:59 pm

ಸ್ಪೆಷಲ್ ಡೆಸ್ಕ್ : ಓಟ್ಸ್ ನ್ನು ನೀವು ಸಾಮಾನ್ಯವಾಗಿ ಯಾವುದಕ್ಕೆ ಬಳಕೆ ಮಾಡುತ್ತೀರಿ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಹೊಟ್ಟೆ ತುಂಬಿಸಿಕೊಳ್ಳಲು ತಾನೇ. ಇದೆ ಓಟ್ಸ್ ನ್ನು ಸೌಂದರ್ಯ ದ್ವಿಗುಣ ಗೊಳಿಸಲು, ಆರೋಗ್ಯಯುತವಾದ ಸ್ಕಿನ್ ಪಡೆಯಲು ಬಳಕೆ ಮಾಡಬಹುದು.

ಅದು ಹೇಗೆ ಅನ್ನೋದನ್ನು ನೋಡೋಣ… ಆಮೇಲೆ ನೀವು ಕೂಡ ಒಂದು ಬಾರಿ ಟ್ರೈ ಮಾಡಿ ಬೆಸ್ಟ್ ಫಲಿತಾಂಶ ಪಡೆಯಿರಿ..

ಮುಖ ಡ್ರೈ ಆಗಿ ತುರಿಕೆ, ತ್ವಚೆ ಕೆಂಪಾಗುವುದು ಇವೆಲ್ಲ ಸಮಸ್ಯೆ ಕಾಣಿಸಿಕೊಂಡರೆ ಓಟ್ಸ್​ನ್ನು ಪುಡಿ ಮಾಡಿ ಬಾತ್​ಟಬ್​ಗೆ ಹಾಕಿ ನೀರಿನ ಜೊತೆ ಮಿಕ್ಸ್​ ಮಾಡಿ. ಜೊತೆಗೆ ಸ್ವಲ್ಪ ಎಸೆನ್ಶಿಯಲ್​ ಆಯಿಲ್​ನ್ನು ಕೂಡ ಸೇರಿಸಿ ಸ್ನಾನ ಮಾಡಿದ್ರೆ ತ್ವಚೆಗೆ ಪೋಷಣೆ ಸಿಗುತ್ತದೆ.

ಓಟ್ಸ್​ನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪೇಸ್ಟ್​ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್​ ಮಾಡಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದಲ್ಲಿರುವ ಡೆಡ್ ಸ್ಕಿನ್ ನಿವಾರಣೆಯಾಗಿ ಮುಖ ಸ್ಮೂತ್ ಆಗುತ್ತದೆ.

ಒಂದು ಚಮಚ ಓಟ್ಸ್​ ಪುಡಿ, ಅರ್ಧ ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗ ಸೇರಿಸಿ ಮಿಕ್ಸ್​ ಮಾಡಿ ಪೇಸ್ಟ್​ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮೊಡವೆ ಸಮಸ್ಯೆ ಇನ್ನಿಲ್ಲದಂತೆ ಮಾಯವಾಗುತ್ತದೆ.

ಓಟ್ಸ್​ನ್ನು ಪುಡಿ ಮಾಡಿ ಅದಕ್ಕೆ ಟೊಮೆಟೊ ತಿರುಳು ಮತ್ತು ಒಂದು ಚಮಚ ರೋಸ್​ ವಾಟರ್​ ಸೇರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದರೆ ಆಯ್ಲಿ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions