ಸುಭಾಷಿತ :

Monday, September 23 , 2019 3:56 PM

ಟರ್ಕಿಯಲ್ಲಿ ಉದ್ಯಮಿ ಜೊತೆ ಸಪ್ತಪದಿ ತುಳಿದ ನಟಿ, ಸಂಸದೆ ನುಸ್ರತ್ : ಪ್ರಮಾಣವಚನಕ್ಕೆ ಗೈರು 


Thursday, June 20th, 2019 11:22 am

ನವದೆಹಲಿ: ಪಶ್ಚಿಮ ಬಂಗಾಳದ ನಟಿ,ಟಿಎಂಸಿ ಯಿಂದ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ನುಸ್ರತ್ ಜಹಾನ್ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯಲ್ಲಿ ಸಪ್ತಪದಿ ತುಳಿದಿದ್ದಾರೆ. 

ತಮ್ಮ ವಿವಾಹದ ಬಗ್ಗೆ ಗುರುವಾರ ಬೆಳಗ್ಗೆ ನುಸ್ರತ್ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ನುಸ್ರತ್ ಮದುವೆ ಹಿನ್ನೆಲೆಯಲ್ಲಿ ಸಂಸತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಬಂಗಾಳಿ ಸಿನಿಮಾ ನಟಿ ನುಸ್ರತ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾಸಿರ್ ಹಾತ್ ಕ್ಷೇತ್ರದಿಂದ ಸ್ಪರ್ಧಿಸಿ,  ಗೆಲುವು ಸಾಧಿಸಿದ್ದರು. ನುಸ್ರತ್ ಗೆಳತಿ, ಸಹೋದ್ಯೋಗಿ ಸಂಸದೆ ಮಿಮಿ ಚಕ್ರವರ್ತಿ ಕೂಡಾ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಮಿಮಿ ಕೂಡಾ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದಾರೆ.

ನುಸ್ರತ್​ ಜಹಾನ್​ ಮತ್ತು ನಿಖಿಲ್​ ಜೈನ್​ ಜುಲೈ 4 ರಂದು ಕೋಲ್ಕದಲ್ಲಿ ಭವ್ಯ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಬೆಂಗಾಳಿ ಚಿತ್ರರಂಗದ ಕಲಾವಿದರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions