ಸುಭಾಷಿತ :

Monday, September 23 , 2019 3:54 PM

ಭಾರತದಲ್ಲೇ ಸದ್ದು ಮಾಡಿದ್ದ ಮಂಡ್ಯ ಲೋಕಸಭಾ ಸಭಾ ಕ್ಷೇತ್ರ ಯಾರ ಮಡಿಲಿಗೆ?


Monday, May 20th, 2019 8:56 am


ಮಂಡ್ಯ : ಸಾಕಷ್ಟು ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ಕೆಲವೊಂದು ಸಮೀಕ್ಷೆಗಳು ಸುಮಲತಾ ಗೆಲುತ್ತಾರೆ ಅಂತ ಹೇಳುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಂಬತ್ತರಲ್ಲಿ ಮತ್ತು ಪಕ್ಷೇತರ ಅಂದರೆ ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಸೀ ವೋಟರ್ ಸರ್ವೆ ಹೇಳಿದೆ.

ಇಂಡಿಯಾ ಟುಡೇ ಆಕ್ಸಿಸ್ ಸರ್ವೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21ರಿಂದ 25 ಸೀಟುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ 3ರಿಂದ 6 ಸೀಟುಗಳು ಸಿಗಲಿದ್ದು, ಸ್ವತಂತ್ರ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಹೇಳಿದೆ.
ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಕರ್ನಾಟಕದಲ್ಲಿ 21 ಸ್ಥಾನಗಳ ಸಿಗಲಿವೆಯಂತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬರೀ ಏಳೂ ಸ್ಥಾನಗಳು ದೊರಕಲಿದ್ದು ಇತರ ಪಕ್ಷಗಳಿಗಾಗಲಿ ಪಕ್ಷೇತರರಿಗಾಗ್ಲಿ ಯಾವುದೇ ಸ್ಥಾನಗಳು ಸಿಗಲ್ಲ ಅಂತ ಹೇಳಿದೆ. ಇನ್ನು ಈ ಸಮೀಕ್ಷೆಯಲ್ಲಿ ಸುಮಲತಾಗೆ ಯಾವುದೇ ಸ್ಥಾನಗಳನ್ನ ಕೊಟ್ಟಿಲ್ಲ.

ಚಾಣಾಕ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಗೆ 23 ಸೀಟುಗಳು ಬಂದರೆ, 5 ಸೀಟುಗಳು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಪಾಲಾಗಲಿದೆ ಎನ್ನಲಾಗಿದೆ. ಇಲ್ಲೂ ಕೂಡ ಮಂಡ್ಯದಲ್ಲಿ ಸುಮಲತಾ ಸೋಲು ಕಾಣುತ್ತಾರೆ ಅನ್ನೋದು ಸಮೀಕ್ಷಾ ವರದಿಯಾಗಿದೆ.

ಇನ್ನು ಎಬಿಪಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳನ್ನ ತನ್ನದಾಗಿಸಿಕೊಂಡರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಬಾರಿಸಲಿದೆ ಎನ್ನಲಾಗಿದೆ. ಇದರಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಯಾಗಲಿದೆ. ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 17 ಸ್ಥಾನಗಳು, ಕಾಂಗ್ರೆಸ್‍ಗೆ 8 ಸ್ಥಾನಗಳು ಸಿಗಲಿವೆಯಂತೆ. ಜೆಡಿಎಸ್‍ಗೆ 3 ಸೀಟುಗಳು, ದೊರಕಲಿದ್ದಾವೆ ಎನ್ನಲಾಗಿದ್ದು, ಈ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಸಿಗಲಿರೋ 3 ಸೀಟುಗಳು ಹಾಸನ, ಮಂಡ್ಯ, ತುಮಕೂರು ಎನ್ನಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions