ಸುಭಾಷಿತ :

Monday, September 23 , 2019 3:55 PM

ಕಾರು ಚಾಲನೆ ಮಾಡೋರು ತಪ್ಪದೇ ಓದಬೇಕಾದ ಸುದ್ದಿ ಇದು : ಕಾರಿನ ಸೀಟ್​ ಬೆಲ್ಟ್​ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ: ಇಂದಿನಿಂದಲೇ ಜಾರಿ


Saturday, June 15th, 2019 4:27 am

 

ನವದೆಹಲಿ: ಕಾರು ಚಾಲನೆ ಮಾಡೋರು ತಪ್ಪದೇ ಒದ ಬೇಕಾದ ಸುದ್ದಿ ಇದು ಹೌದು, ಒಂದು ವೇಳೆ ಕಾರನ್ನು ಚಾಲನೆ ಮಾಡೋ ಟೈಮ್ ನಲ್ಲಿ ನಿಮ್ಮ ಕಾರಿನ ಸೀಟ್​ ಬೆಲ್ಟ್​ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ ಬೀಳಲಿದ್ದು ಈ ಹೊಸ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿರುವ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ವಯ ಪರಿಷ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಈ ದಂಡ ಶುಲ್ಕಗಳು ಚಾಲ್ತಿಗೆ ಬರಲಿದೆ.ಚಾ

ಲನಾ ಅನುಜ್ಞಾ ಪತ್ರ (ಡ್ರೈವಿಂಗ್​ ಲೈಸನ್ಸ್​) ಇಲ್ಲದೆ ವಾಹನ ಚಾಲನೆ ಮಾಡಿದರೆ 10 ಸಾವಿರ ರೂಪಾಯಿ ಜುಲ್ಮಾನೆಯ ಜತೆಗೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಅಂತೆಯೇ ವಾಹನದ ದಾಖಲಾತಿಗಳು ಹೊಂದಿಲ್ಲದಿದ್ದರೆ 5 ಸಾವಿರ ರೂ. ದಂಡದ ಜತೆಗೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ.

ವಾಹನವು ಪರಿಸರ ಮಾಲಿನ್ಯ ಉಂಟು ಮಾಡುತ್ತಿಲ್ಲ ಎಂಬ ಪ್ರಮಾಣಪತ್ರವನ್ನು (ಪರಿಸರ ಮಾಲಿನ್ಯ ನಿಯಂತ್ರಣದಲ್ಲಿದೆ: ಪಿಯುಸಿಎಲ್​) ಹೊಂದಿಲ್ಲದೇ ಇದ್ದರೆ 1,500 ರೂ. ದಂದ ವಿಧಿಸಲಾಗುತ್ತದೆ. ಇದಲ್ಲದೇ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತ ಪೊಲೀಸರಿಗೆ ಸಿಕ್ಕಿಬಿದ್ದರೆ ಪಾವತಿಸಬೇಕಾದ ಜುಲ್ಮಾನೆ ಮೊತ್ತವನ್ನು 25 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ವಾಹನ ಚಾಲನೆ ಮಾಡುತ್ತಾ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತಿರುವುದು ಪತ್ತೆಯಾದರೆ 5 ಸಾವಿರ ರೂ. ದಂಡವನ್ನು ಕೂಡ ನೀವು ಕಟ್ಟಬೇಕು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions