ಸುಭಾಷಿತ :

Sunday, January 26 , 2020 4:16 AM

ಕೂದಲು, ತ್ವಚೆ, ಅರೋಗ್ಯ… ಸಮಸ್ಯೆ ಯಾವುದೇ ಇರಲಿ ಎಲ್ಲದಕ್ಕೂ ಸೈ ನೀಲಗಿರಿ ಎಣ್ಣೆ


Thursday, July 11th, 2019 10:29 am

ಸ್ಪೆಷಲ್ ಡೆಸ್ಕ್ : ಅರೋಗ್ಯ ಸಮಸ್ಯೆ ನಿವಾರಣೆ ಮಾಡುವ ನೀಲಗಿರಿ ಎಣ್ಣೆಯನ್ನು ಕೂದಲು ಮತ್ತು ತ್ವಚೆಯ ರಕ್ಷಣೆಗೂ ಹೇಗೆ ಬಳಕೆ ಮಾಡಬಹುದು ಅನ್ನೋದನ್ನು ತಿಳಿಯಿರಿ..

ಶೀತ, ತಲೆ ನೋವು, ಜ್ವರ, ಕೆಮ್ಮು.. ಸಮಸ್ಯೆ ಯಾವುದೇ ಇರಲಿ ಎಲ್ಲವನ್ನೂ ನಿವಾರಣೆ ಮಾಡುವ ಶಕ್ತಿ ನೀಲಗಿರಿ ಎಣ್ಣೆಗಿದೆ. ನೀಲಗಿರಿ ಎಣ್ಣೆ ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದು ಅರೋಗ್ಯ ಸಮಸ್ಯೆಯನ್ನು ನಿವಾರಿಸಲು ಮಾತ್ರವಲ್ಲ, ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹ ನೀಲಗಿರಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗದ್ರೆ ಇದರಿಂದ ಕೂದಲು ಮತ್ತು ತ್ವಚೆಗೆ ಏನು ಪ್ರಯೋಜನಗಳಿವೆ ತಿಳಿಯೋಣ…

ಸಾಫ್ಟ್ ತ್ವಚೆ : ಮಾಲಿನ್ಯ ಮತ್ತು ಒಣ ಹವೆಯಿಂದ ತ್ವಚೆಗೆ ಹಾನಿಯಾಗುತ್ತದೆ. ಶುಷ್ಕ ಗಾಳಿಯಿಂದ ತ್ವಚೆಯಲ್ಲಿ ಸೂಕ್ಷ್ಮ ಜೀವಾಣುಗಳು ಸೇರಿಕೊಂಡು ಹಲವಾರು ಸಮಸ್ಯೆಗಳನ್ನುಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀಲಗಿರಿ ಬಳಕೆ ಮಾಡಿ. ನೀಲಗಿರಿ ಎಣ್ಣೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣ ಇದೆ. ಇದು ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ತ್ವಚೆ ಸಾಫ್ಟ್‌ ಮತ್ತು ಕಲೆರಹಿತವಾಗುತ್ತದೆ.

ನೋವು ನಿವಾರಕ : ಯಾವುದೇ ರೀತಿಯ ನೋವು, ಉರಿ ಕಂಡು ಬಂದರೆ ಕೂಡಲೇ ಈ ಎಣ್ಣೆ ಹಚ್ಚಿ, ನಿಮಗೆ ಬೇಗನೆ ಆರಾಮ ಸಿಗುತ್ತದೆ.

ಅರೋಮಾಥೆರಪಿಗಾಗಿ : ಬ್ಯುಸಿ ಲೈಫ್‌ಸ್ಟೈಲ್‌ನಿಂದಾಗಿ ಹಲವಾರು ಜನಕ್ಕೆ ಆರಾಮವಾಗಿರಲು ಸಹ ಸಾಧ್ಯವಿಲ್ಲ. ಇದರಿಂದಾಗಿ ಸುಸ್ತು, ಅವಿಶ್ರಾಂತಿ ಉಂಟಾಗುತ್ತದೆ.ಮೂಡ್‌ ಚೆನ್ನಾಗಿ ಇರಲು ನೀಲಗಿರಿ ಎಣ್ಣೆ ಸಹಾಯಕ. ನೀಲಗಿರಿ ಎಸೆನ್ಶಿಯಲ್‌ ಆಯಿಲ್‌ ನ ಪರಿಮಳದಿಂದ ಮನಸು ತಾಜಾತನದಿಂದ ಕೂಡಿರುತ್ತದೆ. ಅಲ್ಲದೆ ರಿಲ್ಯಾಕ್ಸ್ ಆಗೋದು ಖಂಡಿತಾ.

ಕೂದಲಿಗಾಗಿ : ನೀಲಗಿರಿ ಎಣ್ಣೆಯಲ್ಲಿ ಆ್ಯಂಟಿಫಂಗಲ್‌ ಗುಣ ಇರುತ್ತದೆ. ಇದು ರೋಗ ಹರಡುವಿಕೆಯನ್ನು ತಡೆಯುತ್ತದೆ. ಇದು ತಲೆಯ ರೋಮ ಚಿದ್ರಗಳನ್ನು ತೆರೆಯುತ್ತದೆ. ಅಲ್ಲದೆ ಕೂದಲಿಗೆ ಬುಡದಿಂದಲೆ ಪೋಷಣೆ ನೀಡುತ್ತದೆ. ಈ ಎಣ್ಣೆ ಬಳಕೆ ಮಾಡುವುದರಿಂದ ಕೂದಲು ದಪ್ಪವಾಗುತ್ತದೆ ಹಾಗೂ ತುರಿಕೆಯಿಂದ ಆರಾಮ ಸಿಗುತ್ತದೆ.

ಬಾಯಿಯ ಆರೋಗ್ಯ : ನೀಲಗಿರಿ ಎಣ್ಣೆಯು ಬಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವ ಇದು ದಂತಕುಳಿ, ಜಿಂಗೈವಿಟಿಸ್ ಇನ್ನಿತರ ಎಲ್ಲಾ ಸಮಸ್ಯೆ ನಿವಾರಣೆ ಮಾಡುತ್ತದೆ.

ಹೇನು ನಿವಾರಕ : ಹೌದು ಇದೊಂದು ಹೇನು ನಿವಾರಕವಾಗಿದೆ. ನೈಸರ್ಗಿಕವಾಗಿ ಕೀಟನಾಶಕಾರಿ ಆಗಿರುವಂತಹ ನೀಲಗಿರಿ ಎಣ್ಣೆಯು ಹೇನು ಕೊಲ್ಲುವುದು ಮತ್ತು ಅದರ ಮೊಟ್ಟೆಗಳನ್ನು ಕೂಡ ಇಲ್ಲದಂತೆ ಮಾಡಿ, ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions