“ಪ್ರಕಾಶ್ ರೈ ಬಾಯಿ ಬಚ್ಚಲು” : ಮುಖ್ಯಮಂತ್ರಿ ಚಂದ್ರು ವಾಗ್ದಾಳಿ


Tuesday, June 5th, 2018 3:19 pm

ತುಮಕೂರು:  “ಪ್ರಕಾಶ್ ರೈ ಬಾಯಿ ಬಚ್ಚಲು”..ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡ್ತಾರೆ ಅಂತಾ ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಟಾಂಗ್ ನೀಡಿದ್ದಾರೆ.

ಅವರು ಇಂದು  ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡಿ ರಜನಿಕಾಂತ್ ಅಭಿನಯದ ಕಾಲ ಸಿನಿಮಾಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ನಾಡು,ನುಡಿ,ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿ, ಎಂತಹ ಸ್ನೇಹಿತರಾದರು ಕೂಡ ಅಂತಹವರ ವಿರುದ್ದ ಧ್ವನಿ ಎತ್ತುತ್ತೇನೆ, ರಾಜ್ಯದ ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್ ಆಗಲಿ, ಕಮಲಹಾಸನ್ ಆಗಲಿ, ಪ್ರಕಾಶ್ ರೈಗೂ ಧಿಕ್ಕರಿಸುತ್ತೇನೆ ಅಂತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇದೇ ವೇಳೆ ಅವರು ಮಾತನಾಡಿ ಕಾಲ ಸಿನಿಮಾ ಬಿಡುಗಡೆ ಮಾಡದಂತೆ ಕಾನೂನು ಪ್ರಕಾರ ಹೇಳಲಿಕ್ಕೆ ಆಗದಿದ್ದರು,ವಿತರಿಕರಿಗೆ ಮತ್ತು ಪ್ರದರ್ಶಕರಿಗೆ ಅರಿವು ಮೂಡಿಸುತ್ತೇವೆ,ಅಕಸ್ಮತ್ ಪ್ರದರ್ಶನ ಮಾಡಿದರೆ ನಾವು ದಂಗೇಳುತ್ತೇವೆ ಅಂತಾ ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.ಪ್ರಚಾರಕ್ಕೆ ಅನುಗುಣವಾಗಿ ಮಾತಾನಾಡೋ ಪ್ರಕಾಶ್ ರೈ ಬಾಯಿ ಕೂಡ ಬಚ್ಚಲೇ ಪ್ರಕಾಶ್ ರೈ ಮೇಲೆ ಹರಿಹಾಯ್ದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions