ಸುಭಾಷಿತ :

Saturday, October 19 , 2019 4:37 PM

ಎಂಟಿಬಿ ನಾಗರಾಜ್ ‘ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಜಂಪ್ ಆಗಲು ಅಸಲಿ ಕಾರಣ ಇದು’!?


Sunday, July 14th, 2019 4:58 pm


ಸ್ಪೆಷಲ್‌ಡೆಸ್ಕ್: ಹನುಮಂತನ ಎದೆ ಬಗೆದರೆ ಹೇಗೆ ಶ್ರೀರಾಮ ಕಾಣುತ್ತಾನೋ – ಹಾಗೆಯೇ ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಜಪ ಕಾಣ್ಸುತ್ತೆ ಅಂತ ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್‌ ಅತೃಪ್ತಿ ಶಾಸಕ ಎಂಟಿಬಿ ನಾಗರಾಜ್‌ ಹೇಳಿದ್ದರು ಅಷ್ಟರ ಮಟ್ಟಿಗೆ ನಾಗರಾಜ್‌ ಅವರು ಸಿದ್ದರಾಮಯ್ಯ ಅವರನ್ನು ನಂಬಿದ್ದರು ಆದೇ ಕಾರಣದಿಂದ ಸಿದ್ದರಾಮಯ್ಯ ಅವರು ಕೂಡ ದೋಸ್ತಿ ಸರಕಾರಕದ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಅವರಿಗೆ ಸಚಿವ ಸ್ಥಾನವನ್ನು ನೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯರನ್ನು ದೇವರ ರೀತಿಯಲ್ಲಿ ನೋಡಿದ್ದ ನಾಗರಾಜ್‌ ಅವರು ಈಗ ಅದೇ ಸಿದ್ದರಾಮಯ್ಯನ ಎದೆಗೆ ಒದ್ದು ಈಗ ಬಿಜೆಪಿ ಜೊತೆಗೆ ಕೈ ಜೋಡಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿನ್ನೆ ಬರೋಬ್ಬರಿ ಘಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಎಂಟಿಬಿ ನಾಗರಾಜ್‌ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟ ಹಾಗೇ ದೋಸ್ತಿ ನಾಯಕರ ಮುಂದೆ ಕಾಂಗ್ರೆಸ್‌ನಲ್ಲಿ ಇರುವ ಬಗ್ಗೆ ಹೇಳಿದ್ದರು. ಈ ನಡುವೆ ಇಂದು ಅ’ನಿರೀಕ್ಷಿತ’ ಬದಲಾವಣೆಯಲ್ಲಿ ಇಂದು ಬೆಳಗ್ಗೆ ಸೀದಾ ಮುಂಬೈ ವಿಮಾನವೇರಿರುವ ನಾಗರಾಜ್‌ ಅವರು ಮುಂಬೈನ ಅತೃಪ್ತ ಶಾಸಕರ ಜೊತೆಗೆ ಸೇರಿಕೊಂಡಿದ್ದು, ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ.

ಇನ್ನು ಕಾಂಗ್ರೆಸ್‌ ಪಕ್ಷ, ಸಿದ್ದರಾಮಯ್ಯ ಅವರ ಬಗ್ಗೆ ಅಪಾರವಾದ ಗೌರವ ಹೊಂದಿದ್ದ ಅವರು ಪಕ್ಷಕ್ಕೆ ಗುಡ್‌ ಬೈ ಹೇಳುವುದಕ್ಕೆ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದು ಈ ಪೈಕಿ ಪುತ್ರನ ಮುಂದಿನ ರಾಜಕೀಯ ಜೀವನಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಹೌದು, ಎಟಿಬಿ ನಾಗರಾಜ್ ಪುತ್ರ ನಿತಿನ್‍ಗೆ ಹೊಸಕೋಟೆ ವಿಧಾನಸಭೆ ಬಿಜೆಪಿ ಟಿಕೆಟ್ ಕೊಡುವುದು. ಸಂಸದ ಬಚ್ಚೇಗೌಡರ ಪುತ್ರ ಶರತ್‍ಗೆ ಮುಂದಿನ ಲೋಕಸಭೆ ಟಿಕೆಟ್ ಕೊಡುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಎಂಟಿಬಿ ನಾಗರಾಜ್ ಅವರು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಮತ್ತು ಸಂಸದ ಬಿ.ಎನ್ ಬಚ್ಚೇಗೌಡರ ನಡುವೆ ಇದ್ದ ಮನಸ್ತಾಪವನ್ನು ಗಮನಿಸಿದ ಹಿರಿಯ ಬಿಜೆಪಿ ಮುಖಂಡರು ಇಬ್ಬರನ್ನು ಕೂರಿಸಿ ಹೇಳಿದ್ದಾರೆ ಎನ್ನಲಾಗಿದೆ ಇನ್ನು ಬಿಜೆಪಿ ನಾಯಕರ ಮಾತಿಗೆ ಒಪ್ಪಿಗೆ ನೀಡಿದ ಎಂಟಿಬಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನಲ್ಲಿದ್ದರೆ ಮಗನಿಗೆ ಭವಿಷ್ಯವಿಲ್ಲ ಎಂದ ಅರಿತ ಎಂಟಿಬಿ ಬಿಜೆಪಿಗೆ ಜಂಪ್ ಆಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಎಂಟಿಬಿ ಪುತ್ರ ನಿತಿನ್ ಗರುಡಾಚಾರ್ ಪಾಳ್ಯದ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದು, ಶರತ್‌ ಬಚ್ಚೆಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದು ಸೋಲುಕಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions