ಮಾಹಿಯ ಲವ್ ಅಫೇರ್.. ರೂಮರ್ಸ್ ಬಗ್ಗೆ ನಿಮಗೆ ಎಷ್ಟು ಗೊತ್ತು? ಇಲ್ಲಿದೆ ನೋಡಿ


Saturday, July 7th, 2018 1:46 pm

ಸ್ಪೆಷಲ್ ಡೆಸ್ಕ್: ಸಾಕ್ಷಿ ರಾವತ್ ರನ್ನು ಮದುವೆಯಾಗೋದಕ್ಕಿಂತ ಮುನ್ನ ಮಹೇಂದ್ರ ಸಿಂಗ್ ಧೋನಿ ಹೆಸರು ಒಂದಿಷ್ಟು ನಟಿಯರ ಜೊತೆ ಕೇಳಿ ಬಂದಿದೆ. ಅವುಗಳಲ್ಲಿ ಕೆಲವೊಂದಿಷ್ಟು ರೂಮೊರ್ ಗಳಾದರೆ, ಕೆಲವು ನಿಜವಾಗಿತ್ತು ಎಂದು ಹೇಳಲಾಗುತ್ತದೆ.

ಎಂ. ಎಸ್ ಧೋನಿ ಚಿತ್ರದಲ್ಲಿ ತಿಳಿಸಿದಂತೆ ಅವ್ರ ಗರ್ಲ್ ಫ್ರೆಂಡ್ ಪ್ರಿಯಾಂಕಾ ಝಾ ಸಾವಿನ ನಂತ್ರ ಹಾಗು ಸಾಕ್ಷಿ ಧೋನಿ ಜೀವನದಲ್ಲಿ ಬರುವ ಮುನ್ನ ಧೋನಿ ಜೀವನದಲ್ಲಿ ಬಂದು ಹೋದ ಹುಡುಗಿಯರು ಇವರು..

ರಾಯ್ ಲಕ್ಷ್ಮಿ : ಧೋನಿಯ ಹೆಸರು ಹೆಚ್ಚಾಗಿ ಕೇಳಿ ಬಂದಿದ್ದು ನಮ್ಮ ಕನ್ನಡ ನಟಿ ರಾಯ್ ಲಕ್ಷ್ಮಿ ಜೊತೆ. 2008 ರಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಲಕ್ಷ್ಮಿ ಧೋನಿಯನ್ನು ತುಂಬಾ ಇಷ್ಟ ಪಟ್ಟಿದ್ದರಂತೆ. ಒಂದು ವೇಳೆ ಧೋನಿ ಪ್ರಪೋಸ್ ಮಾಡಿದ್ದಾರೆ ನಾನು ಖಂಡಿತವಾಗಿ ಅವರನ್ನೇ ಮದುವೆಯಾಗುತ್ತಿದೆ ಅಂದು ಲಕ್ಷ್ಮಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ದೀಪಿಕಾ ಪಡುಕೋಣೆ : ಹೌದು ದೀಪಿಕಾ ಜೊತೆ ಸಹ ಧೋನಿ ಹೆಸರು ಕೇಳಿ ಬಂದಿತ್ತು. ಅದು ದೀಪಿಕಾ ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಇವರಿಬ್ಬರು ಕ್ಲೋಸ್ ಆಗಿದ್ದರು. ಆಕೆಗೋಸ್ಕರವೇ ಧೋನಿ ತನ್ನ ನೀಳ ಕೂದಲನ್ನು ಕತ್ತರಿಸಿದ್ದರು ಎಂದು ಹೇಳಲಾಗಿತ್ತು. ಆದರೆ ಇಬ್ಬರು ಕೇವಲ ಸ್ನೇಹಿತರಾಗಿದ್ದರು. ಮುಂದೆ ದೀಪಿಕಾ ಯುವರಾಜ್ ಸಿಂಗ್ ಜೊತೆ ಡೇಟಿಂಗ್ ಮಾಡಿದ್ದು ಸುದ್ದಿಯಾಗಿತ್ತು.

ಅಸಿನ್ : ಧೋನಿ ಮತ್ತು ಘಜನಿ ನಟಿ ಅಸಿನ್ ಹೆಸರು ಸಹ ದೊಡ್ಡ ಸುದ್ದಿಯಾಗಿತ್ತು. ಇಬ್ಬರು ಜೊತೆಯಾಗಿ ಜಾಹಿರಾತಿನಲ್ಲಿ ಕೆಲಸ ಮಾಡಿರುವುದರಿಂದ ಇಬ್ಬರು ಜೊತೆಯಾಗಿ ಸಮಯ ಕಳೆಯುತ್ತಿದ್ದರು. ಹಲವಾರು ಕಡೆಗಳಲ್ಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಒಮ್ಮೆ ಧೋನಿ ಅಸಿನ್ ಅವರ ಮನೆಯಿಂದ ಹೊರಗೆ ಬಂದಿರುವುದನ್ನು ಸಹ ಜನರು ನೋಡಿ ಅದು ಸಹ ಸುದ್ದಿಯಾಗಿತ್ತು. ಆದರೆ ಇಬ್ಬರು ಬೇಗನೆ ದೂರವಾಗಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions