ಸುಭಾಷಿತ :

Sunday, January 26 , 2020 4:16 AM

ಮೂತ್ರ ವಿಸರ್ಜನೆ ಮಾಡಲು ರೈಲನ್ನೇ ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್‌


Thursday, July 18th, 2019 6:29 pm


ಮುಂಬೈ: ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ರೈಲು ಉಲ್ಲಾಸ್‍ನಗರದಿಂದ ಮುಂಬೈಯತ್ತ ಹೋಗುತಿತ್ತು ಎನ್ನಲಾಗಿದೆ. ಈ ವೇಳೆ ಮೋಟರ್ ಮ್ಯಾನ್ ವಿಠಲವಾಡಿ ರೈಲ್ವೆ ನಿಲ್ದಾಣದ ಬಳಿ ರೈಲನ್ನು ನಿಲ್ಲಿಸಿದ್ದಾನೆ. ಚಾಲಕನ ವೈರಲ್ ಫೋಟೋ ಹಾಗೂ ವಿಡಿಯೋಗಳು ಕೇಂದ್ರ ರೈಲ್ವೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions