‘ಮೋದಿಯಂತಲ್ಲ ನಾನು, ಬಡವರ ಬೆವರ ಹನಿ ಸ್ಪರ್ಶಿಸಿ ಊಟ ಮಾಡುವವನು’ : ಸಿಎಂ ಹೆಚ್ಡಿಕೆ


Wednesday, April 17th, 2019 8:47 pm

ಶಿವಮೊಗ್ಗ  : ನಾನು ಪ್ರಧಾನಿಯಂತೆ ದಿನವೂ ಮುಖಕ್ಕೆ ವ್ಯಾಕ್ಸಿಂಗ್​ ಮಾಡಿಸಿಕೊಂಡು ಮುಖ ಹೊಳೆಯುವಂತೆ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಪ್ರಚಾರ ನಡೆಸಿದ ಸಿಎಂ ಎಚ್​ಡಿಕೆ ಬಡವರು ಮುಟ್ಟಿದಾಕ್ಷಣ ಕೈಗೆ ಡೆಟಾಲ್ ಹಾಕಿಕೊಂಡು ಕೈತೊಳೆದುಕೊಳ್ಳುವುದಿಲ್ಲ ಎಂದು ಶಾಸಕ ರಾಜು ಕಾಗೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಾನು ಬಡವರೊಂದಿಗೆ ಬೆರೆಯುತ್ತೇನೆ. ಬಡವರ ಬೆವರು ನನ್ನ ಕೈಗೆ ತಾಗಿರುತ್ತದೆ. ಆ ಕೈ ತೊಳೆಯದೆ‌ ನಾನು ಊಟ ಮಾಡಿದ್ದೇನೆ. ಇವರು ಹೇಳಿದಂತೆ ನಾನು 20 ಸಲ ಸ್ನಾನ ಮಾಡಿದಾಕ್ಷಣ ಬಿಳುಪಾಗುವುದಿಲ್ಲ ಎಂದು ಸಿಎಂ ಚಾಟಿ ಬೀಸಿದರು. ಬಿಎಸ್​ವೈಗೆ ಜನರ ಸಮಸ್ಯೆ ಬೇಕಿಲ್ಲ, ಸಿಎಂ ಆಗಬೇಕಿದೆ. ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಯಾಕೆ ಇವರ ಮುಖ ನೋಡಿ ಮತ ಕೇಳಲು ಇವರಿಗೆ ಸಾಮರ್ಥ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions