-->

ಯೂಟ್ಯೂಬ್ ನಿಂದ ಮೋದಿ ಬಯೋಪಿಕ್ ಟ್ರೇಲರ್ ನಾಪತ್ತೆ


Tuesday, April 16th, 2019 9:20 pm

ಮುಂಬೈ : ಲೋಕಸಭೆ ಚುನಾವಣಾ ಸಮರದ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ  ಪಿಎಂ ನರೇಂದ್ರ ಮೋದಿ’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ.  ಸಿನಿಮಾ ಬಿಡುಗಡೆಯ ಹಗ್ಗ ಜಗ್ಗಾಟ ನಡೆಯುತ್ತಿರುವ ಮಧ್ಯೆ ಚಿತ್ರದ ಟ್ರೇಲರ್ ಯೂಟ್ಯೂಬ್ ನಿಂದ ನಾಪತ್ತೆಯಾಗಿದೆ.

ಮೋದಿ ಬಯೋಪಿಕ್ ಟ್ರೇಲರ್ ನ್ನು ಯಾವ ಕಾರಣದಿಂದ ತೆಗೆಯಲಾಗಿದೆ ಎಂಬುದಕ್ಕೆ ಚಿತ್ರತಂಡ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಈ ಮೊದಲು ಮೇರಿಕೋಮ್ ಚಿತ್ರವನ್ನು ನಿರ್ದೇಶಿಸಿದ್ದ ಒಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ರಾಜಕೀಯ ಜೀವನ ಶುರು ಮಾಡಿದ ದಿನಗಳಿಂದ ‘2014’ರಲ್ಲಿ ದೇಶದ ಪ್ರಧಾನಿಯಾದ ದಿನಗಳವರೆಗಿನ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions