ನೀರಲ್ಲಿ ಬಿದ್ದ ಮೊಬೈಲನ್ನ ಮೊದಲಿನಂತೆ ಮಾಡುವುದು ಹೇಗೆ..? ಇಲ್ಲಿದೆ ನೋಡಿ ಟಿಪ್ಸ್


Thursday, January 25th, 2018 11:47 am

ಸ್ಪೆಷಲ್ ಡೆಸ್ಕ್:ಹೆಚ್ಚಿನವರಿಗೆ ಇಂತಹ ಅನುಭವ ಆಗಿರಬಹುದು. ಆಗದೇ ಇರಬಹುದು. ಆದರೆ ಮುಂದೆ ಆದರೆ ಏನು ಮಾಡಬೇಕು..? ಹೌದು. ಬಾತ್ ರೂಮ್ ನಲ್ಲೋ, ಸಮುದ್ರದಲ್ಲಿ ಆಡುವಾಗಲೋ ಅಥವಾ ಮಳೆಯಲ್ಲಿ ನೆನೆದಾಗಲೋ ಮೊಬೈಲ್ ಗಳು ನೀರಲ್ಲಿ ಬಿದ್ದು ಹಾಳಾಗುತ್ತವೆ. ಇದನ್ನ ಸರಿ ಮಾಡುವುದಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಮಾಡುತ್ತಾರೆ. ಆದರೆ ಇನ್ಮುಂದೆ ಹಾಗೇ ಮಾಡಬೇಡಿ. ಅದನ್ನ ಸರಿಪಡಿಸುವ ಟ್ರಿಕ್ಸ್ ನಾವು ಹೇಳಿ ಕೊಡುತ್ತೇವೆ.

ಏನದು ಟ್ರಿಕ್ಸ್..?  ಮೊಬೈಲ್ ನೀರಿಗೆ ಬಿದ್ದರೆ ಮೊದಲು ನಾವು ಇದನ್ನು ಮಾಡಬೇಕು. ಮೊಬೈಲ್ ಸ್ವಿಚ್ ಆಫ್ ಆಗಿರಲಿ, ಬಿಡಲಿ. ನಾವು ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ತೆಗೆಯಬೇಕು. ಆಕಸ್ಮಾತ್ ರಿಮೊವೆಬಲ್ ಬ್ಯಾಟರಿ ಆಗಿರದಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಯಾಕೆಂದರೆ ಬ್ಯಾಟರಿ ಮೂಲಕವೇ ಕರೆಂಟ್ ಪಾಸ್ ಆಗಿ ಶಾಕ್ ಸರ್ಕ್ಯೂಟ್ ಆಗುತ್ತದೆ. ನಂತರ ಮೊಬೈಲ್ ರಿಪೇರಿ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿ ಬಿಡುತ್ತದೆ. ಹೀಗಾಗಿ ತಕ್ಷಣ ಬ್ಯಾಟರಿ ತೆಗೆದು ಬಿಡಿ. ಅನಂತರ ಮೊಬೈಲ್ ನಿಂದ ಮೆಮೊರಿ ಕಾರ್ಡ್ ಹಾಗೂ ಸಿಮ್ ರಿಮೋವ್ ಮಾಡಿ ಬಿಸಿಲಿನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆನ್ ಮಾಡಬೇಡಿ. ನಂತರ ಮೊಬೈಲನ್ನ ಒಂದು ಅಕ್ಕಿಯ ಬ್ಯಾಗ್ ಒಳಗೆ ಹಾಕಿ. ಮೊಬೈಲ್ ಸಂಪೂರ್ಣ ಮುಚ್ಚುವಷ್ಟು ಬ್ಯಾಗ್ ನಲ್ಲಿ ಅಕ್ಕಿ ಇರಲಿ.

ಎರಡು ಮೂರು ದಿನ ಮೊಬೈಲನ್ನ ಅಲ್ಲೇ ಇಡಿ‌. ಯಾಕೆಂದರೆ ಅಕ್ಕಿ ಒಂದು ನೀರನ್ನು ಹೀರಿಕೊಳ್ಳುವ ಅದ್ಭುತ ವಸ್ತು. 3 ದಿನಗಳ ಬಳಿಕ ಫೋನ್ ನನ್ನು ತೆಗೆದು ಬ್ಯಾಟರಿ ಹಾಕಿ ಸ್ವಿಚ್ ಆನ್ ಮಾಡಿ. ನಿಮ್ಮ ಫೋನ್ ಎಂದಿನಂತೆ ವರ್ಕ್ ಆಗುತ್ತದೆ. ಈ ರೀತಿ ಮಾಡಿದರೆ ಶೇಕಡಾ 95% ರಷ್ಟು ಮೊಬೈಲ್ ಗಳು ಸರಿ ಹೋಗುತ್ತವೆ. ಆದರೆ ಸಮುದ್ರ ನೀರಿನಲ್ಲಿ ಮೊಬೈಲ್ ಬಿದ್ದರೆ ಸರಿ ಹೋಗುವ ಸಂಭವ ಕಡಿಮೆ. ಯಾಕೆಂದರೆ ಉಪ್ಪು ನೀರು ಒಂದು ಉತ್ತಮ ವಿದ್ಯುತ್ ವಾಹಕ ಆಗಿರುವುದರಿಂದ ಮೊಬೈಲ್ ಬೇಗ ಹಾಳಾಗಿರುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions