ನಿಮ್ಮ ಮೊಬೈಲ್ ಬ್ಲಾಸ್ಟ್ ಆಗಬಾರದೆಂದರೆ ಹೀಗೆ ಮಾಡಿ..!


Monday, January 22nd, 2018 1:01 pm

ಸ್ಪೆಷಲ್ ಡೆಸ್ಕ್: ಇದು ಮೊಬೈಲ್ ಯುಗ. ಜೊತೆಗೆ ಮೊಬೈಲ್ ಬ್ಲಾಸ್ಟ್ ಸಹ ಅಲ್ಲಲ್ಲಿ ಆಗುತ್ತಿರುತ್ತದೆ. ಇದಕ್ಕೆ ಕಾರಣ ಏನು..? ಓವರ್ ಹೀಟಿಂಗ್, ಬ್ಯಾಟರಿ ಸರಿಯಾಗಿ ಇಲ್ಲದಿರುವುದರಿಂದ ಮೊಬೈಲ್ ಗಳು ಹೀಟ್ ಆಗುತ್ತದೆ. ಇದಕ್ಕೆ ಏನು ಮಾಡಬೇಕು..? ಮೊದಲು ಮೊಬೈಲ್ ಆಯ್ಕೆ ಸರಿಯಾಗಿ ಮಾಡಬೇಕು.

ಒಂದು ಸ್ಮಾರ್ಟ್ ಫೋನ್ ಕೊಳ್ಳುವ ಮುಂಚೆ ಅದರ ಬಗ್ಗೆ ಪೂರ್ಣ ವಿವರಗಳನ್ನು ಸಂಗ್ರಹಿಸಿ. ಹೀಟಿಂಗ್ ಪ್ರೊಬ್ಲಮ್ ಇದೆಯಾ, ಯಾವ ರೀತಿಯ ಬ್ಯಾಟರಿ ಬಳಸಲಾಗುತ್ತಿದೆ..? RAM ಎಷ್ಟು, ಯಾವುದಾದರೂ ಪ್ರೊಸೆಸರ್ನೊಂದಿಗೆ ಆ ಮೊಬೈಲ್ ಮಾರುಕಟ್ಟೆಗೆ ಬಂದಿದೆ..? ಇವೆಲ್ಲವನ್ನ ತಿಳಿದುಕೊಳ್ಳಬೇಕು. ಇವೆಲ್ಲವೂ ಸರಿಯಾಗಿದೆ ಎಂದರೆ ಮಾತ್ರ ಖರೀದಿಸಬೇಕು. ಗಂಟೆಗಳ ಕಾಲ ಯಾವುದೇ ವಿರಾಮವಿಲ್ಲದೆ ಮೊಬೈಲನ್ನೇ ಬಳಸಿದರೆ ಯಾವುದೇ ಫೋನ್‌ ಆದರೂ ಹೀಟ್ ಆಗುತ್ತದೆ. ಇನ್ ಬಿಲ್ಟ್ ಆಗಿ ಫೋನ್ ಅಲ್ಲಿ ಟೆಂಪರೇಚರ್ ಚೆಕ್ ಮಾಡಬಹುದು.

ಇಲ್ಲವೇ ಟೆಂಪರೇಚರ್ ಚೆಕ್ ಮಾಡುವ ಅಪ್ಲಿಕೇಶನ್ ಗಳಿರುತ್ತವೆ. ಫೋನ್ ಟೆಂಪರೇಚರ್ ಹೆಚ್ಚಾದಂತೆ ಕೆಲ ಸಮಯ ಫೋನ್ ಅನ್ನು ಪಕ್ಕದಲ್ಲಿಡಿ. ಫೋನನ್ನು ರೀಬೂಟ್ ಅಥವಾ ಸ್ವಿಚ್ಆಫ್ ಮಾಡುತ್ತಿರಬೇಕು. ಹೀಗೆ ಮಾಡಿದರೆ ಹೀಟಿಂಗ್ ಕಡಿಮೆಯಾಗುತ್ತದೆ. ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫೋನ್ ಹೀಟ್ ಆಗುತ್ತದೆ. ಈಗ ಸ್ಯಾಮ್ಸಂಗ್ ನೋಟ್ 7 ನಲ್ಲಿ ಬಂದಿರುವ ಸಮಸ್ಯೆ ಇದೆ. ಬ್ಯಾಟರಿ ಸರಿಯಾಗಿ ಇಲ್ಲದೆ ಅವು ಸ್ಫೋಟವಾಗುತ್ತದೆ‌.

ಫೋನ್ ಹೆಚ್ಚು ಹೀಟ್ ಗೆ ಕಾರಣ ಗೇಮಿಂಗ್. ಕೆಲವರು ನೀಡ್ ಫಾರ್ ಸ್ಪೀಡ್, ಬ್ಯಾಟ್ ಮೆನ್ ತರಹದ ಮೂವಿ ಗೇಮ್ಸ್ ಕೂಡ ಗಂಟೆಗಳ ಕಾಲ ಆಡುತ್ತಾರೆ. ಗೇಮಿಂಗ್ ಮೇಲೆ ಹೆಚ್ಚಿನ ಸಮಯವನ್ನು ಕಳೆಯುವುದರಿಂದಲೂ ಫೋನ್ ಶೀಘ್ರವಾಗಿ, ಹೆಚ್ಚು ಹೀಟ್ ಆಗುತ್ತದೆ. ಅದೇ ಕೆಲಸವಾಗಿ ಆನ್ ಲೈನ್ ಸ್ಟ್ರೀಮಿಂಗ್ ಮಾಡಿದರೆ ಸಹ ಫೋನ್ ಹಿಟ್ ಆಗುತ್ತದೆ. ಆದ್ದರಿಂದ ಅಗತ್ಯವಿದ್ದರೆ, ನಿಮ್ಮ ಬ್ಯಾಟರಿ ಲೈಫ್ ಅನ್ನು ನೋಡಿ ಸ್ಟ್ರೀಮಿಂಗ್ ಮಾಡುವುದು ಉತ್ತಮ.

ಫೋನ್ ಬ್ಯಾಟರಿ 20% ಕಡಿಮೆಯಿದ್ದರೆ, ಅದನ್ನು ಹೆಚ್ಚಾಗಿ ಬಳಸಬಾರದು. ವಿಶೇಷವಾಗಿ ಕರೆಗಳು ಮಾಡುವುದು, ಕರೆ ತೆಗೆಯುವುದು ಮಾಡಬಾರದು. ಮಲ್ಟಿ ಟಾಸ್ಕಿಂಗ್ ಮಾಡವುದು ತಪ್ಪಲ್ಲ. ಆದರೆ ಒಂದು ಅಪ್ಲಿಕೇಶನ್ ನಲ್ಲಿ ಕೆಲಸ ಮುಗಿದಿದ್ದರೆ ಅದನ್ನು ಮಿನಿಮೀಜ್ ಮಾಡುವ ಬದಲಾಗಿ ಕ್ಲೋಜ್ ಮಾಡಿ. RAM ಮೇಲೆ ಒತ್ತಡ ತರಬೇಡಿ. ಕೊನೆಯದಾಗಿ, ದೂರವಾಣಿ ಮಾತನಾಡುವ ಸಮಯದಲ್ಲಿ ಫೋನ್ ಚಾಟ್ ಮಾಡುವಾಗ, ಫೋನ್ ಮೇಲೆ ಯಾವುದೇ ಮೀಡಿಯಾ ಫೈಲ್ ಪ್ಲೇ ಮಾಡಬೇಡಿ. (ಸಾಂದರ್ಭಿಕಚಿತ್ರ)

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions