ಸುಭಾಷಿತ :

Sunday, January 26 , 2020 4:17 AM

ತುಂಬಾ ಟೇಸ್ಟಿಯಾಗಿರುತ್ತೆ ಬೆಂಗಾಲಿ ಸ್ಪೆಷಲ್‌ ಮಿಸ್ಟಿ ಪುಲಾವ್‌


Tuesday, July 9th, 2019 12:42 pm

ಸ್ಪೆಷಲ್ ಡೆಸ್ಕ್ : ನೀವು ಮನೆಯಲ್ಲಿ ಸಾಮಾನ್ಯವಾಗಿ ಪುಲಾವ್ ಮಾಡಿ ತಿಂದಿರುತ್ತೀರಿ, ಆದರೆ ಬೆಂಗಾಲಿ ಸ್ಪೆಷಲ್ ಮಿಸ್ಟಿ ಪುಲಾವ್ ಸೇವಿಸಿದ್ದೀರಾ? ಇಲ್ಲಾ ಅನ್ನೋದಾದ್ರೆ ಇಲ್ಲಿದೆ ನೋಡಿ ಬಂಗಾಳಿ ಮಿಸ್ಟಿ ಪುಲಾವ್ ನ ಸಿಂಪಲ್ ರೆಸಿಪಿ. ನೀವು ಮನೆಯಲ್ಲಿ ಮಾಡಿ ನೋಡಿ…

ಬೇಕಾಗುವ ಸಾಮಾಗ್ರಿಗಳು : 250 ಗ್ರಾಂ ಗೋಬಿಂದೊಭೋಗ್‌ ರೈಸ್‌ (ಬಂಗಾಲದ ಸುಗಂಧಯುಕ್ತ ಅಕ್ಕಿ), 2 ಚಮಚ ತುಪ್ಪ, 1 ಚಮಚ ಚಕ್ಕೆ, ಲವಂಗ, 2 ಚಮಚ ಗೋಡಂಬಿ, 2 ಚಮಚ ಒಣದ್ರಾಕ್ಷೆ, ಉಪ್ಪು ರುಚಿಗೆ ತಕ್ಕಷ್ಟು, 1/2 ಚಮಚ ಜಾಯ್ ಫಾಲ್ ,ಕರಿಬೇವಿನ ಎಲೆ

ತಯಾರಿಸುವ ವಿಧಾನ :
ಕುಕ್ಕರ್ ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ನಂತರ ಕರಿಬೇವಿನ ಎಲೆ ಮತ್ತು ಎಲ್ಲಾ ಮಸಾಲ ಸಾಮಾಗ್ರಿಗಳನ್ನು ಹಾಕಿ.
ನಂತರ ಅಕ್ಕಿ, ಗೋಡಂಬಿ ಮತ್ತು ಒಣದ್ರಾಕ್ಷೆ ಬೆರೆಸಿ.
ಈಗ ಎರಡು ಬೌಲ್‌ ನೀರು ಬೆರೆಸಿ ಕುಕ್ಕರ್ ಮುಚ್ಚಿ.
ಹತ್ತು ನಿಮಿಷಗಳ ಕಾಲ ನೀರನ್ನು ಕುದಿಬರಿಸಿ.
ಅದಕ್ಕೆ ಸ್ವಲ್ಪ ಸಕ್ಕರೆ, ಉಪ್ಪು ಮತ್ತು ಗರಂ ಮಸಾಲ ಸಾಮಾಗ್ರಿ, ನಂತರ 1/2 ಚಮಚ ಜೈಫಲ್‌ ಪುಡಿ ಹಾಕಿ.
ಎಲ್ಲವನ್ನು ಸರಿಯಾಗಿ ಬೆರೆಸಿ, ಮುಚ್ಚಳ ಹಾಕಿ ಮತ್ತೆ ಬೇಯಿಸಿ.
ಎರಡು ವಿಶಾಲ್ ಆದ ನಂತರ ಕೆಳಗಿಳಿಸಿ.
ನಂತರ ಅದರ ಮೇಲೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಬಿಸಿ ಬಿಸಿಯಾಗಿ ಸರ್ವ್‌ ಮಾಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions