ಸುಭಾಷಿತ :

Saturday, October 19 , 2019 4:33 PM

ಮತದಾರರಿಗೆ ಬಹುಮುಖ್ಯ ಮಾಹಿತಿ : ಪಟ್ಟಿಯಲ್ಲಿ ಹೆಸರು ಸೇರಿಸಲು ಅ. 15 ಕೊನೆಯ ದಿನ


Tuesday, September 17th, 2019 6:27 am

ಬೆಂಗಳೂರು : ಭಾರತೀಯ ಚುನಾವಣಾ ಆಯೋಗ ಅ. 15 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಹಮ್ಮಿಕೊಂಡಿದೆ ಎಂದು ಬೆಂಗಳೂರು ನಗರ ಜಿಲ್ಲೆ ಚುನಾವಣಾಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2020 ಕ್ಕೆ ಮತದಾನ ಪಟ್ಟಿ ಪರಿಷ್ಕರಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ ರಾಜ್ಯಾದ್ಯಂತ ಸೆ. 1 ರಿಂದ ಅ. 15 ರ ವರೆಗೆ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನ ಆರಂಭಿಸಿದೆ.

ಹೊಸ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಯಾವುದೇ ತಿದ್ದುಪಡಿಗಳು ಇದ್ದಲ್ಲಿ, ಮತ್ತು 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೆರಿಸಬಹುದು. ವಿಳಾಸ ಬದಲಾವಣೆ ತಿದ್ದುಪಡಿಗಳು ಇದ್ದಲ್ಲಿ, ಡಿಎಲ್, ಆಧಾರ್ ಕಾರ್ಡ್, ಮೊದಲಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇನ್ನು ಈ ಬಾರಿ ಒಂದು ಕುಟುಂಬದ ಎಲ್ಲಾ ಮತದಾರರ ಹೆಸರು ಒಂದೇ ಮತಗಟ್ಟೆಯಲ್ಲಿರುವಂತೆ ಜಾಗೃತಿ ವಹಿಸಲಾಗುತ್ತದೆ. ಅಲ್ಲದೇ ಮತದಾರರಿಗೆ ಎರಡು ಕಿ.ಮೀ. ವ್ಯಾಪ್ತಿಯೊಳಗೆ ಇರಬೇಕೆಂದು ಸಹ ನಿಗಾ ವಹಿಸಲಾಗುತ್ತದೆ. ಜಿಪಿಎಸ್ ಬಳಸಿ ಮನೆಗಳ ಸಂಖ್ಯೆಯನ್ನು ಮರುವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions