ಸುಭಾಷಿತ :

Tuesday, September 17 , 2019 6:55 AM

-->

ಹಿಮಾಚಲ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮಲಯಾಳಂ ನಟಿ ಮಂಜು ವಾರಿಯರ್ ರಕ್ಷಣೆ


Wednesday, August 21st, 2019 7:26 am

ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ ಹಾಗೂ ಜೊತೆಗಿದ್ದ ಇನ್ನಿತರ 30 ಮಂದಿಯನ್ನು ರಕ್ಷಿಸಿ ಮನಾಲಿಗೆ ಕರೆ ತರಲಾಗಿದೆ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ.

 ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿಯ ಜಿಲ್ಲೆಯ ಛಾತ್ರು ಪ್ರದೇಶದಲ್ಲಿ ಸಿಲುಕಿದ್ದ ಮಂಜು ವಾರಿಯರ್ ಸೇರಿದಂತೆ ಇನ್ನಿತರ 127 ಮಂದಿಯನ್ನು ಮನಾಲಿಗೆ ಕರೆ ತಂದಿರುವುದಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ಠಾಕೂರ್ ತಿಳಿಸಿದರು.

ಮಂಜು ವಾರಿಯರ್ ಹಾಗೂ ನಿರ್ಮಾಪಕ ಸುನಾಲ್ ಕುಮಾರ್ ಶಶಿಧರನ್ ಮತ್ತಿತರ ತಂಡ ಛಾತ್ರು ಪ್ರದೇಶದಲ್ಲಿ ಮಲಯಾಳಂನ ಕಾಯ್ಯಾಟಂ ಚಿತ್ರದ ಚಿತ್ರೀಕರಣದಲ್ಲಿ ತೊಡಗಿತ್ತು. ಆದರೆ, ಪ್ರವಾಹದಿಂದಾಗಿ ಮಂಡಿ- ಲೆಹ್ ಹೆದ್ದಾರಿ ಕುಸಿತಗೊಂಡು ಮಂಜು ವಾರಿಯರ್ ಮತ್ತಿತರರು ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions