-->

ಇದೊಂದು ಮನಕಲಕುವ ಮತದಾನದ ಸುದ್ದಿ : ತಂದೆಯ ಸಾವಿನ ದು:ಖದ ನಡುವೆಯೂ ಮತ ಚಲಾಯಿಸಿದ ವೈದ್ಯಾಧಿಕಾರಿ.!


Thursday, April 18th, 2019 6:04 pm

ಎಲೆಕ್ಷನ್ ಡೆಸ್ಕ್ : ಇದೊಂದು ಮನಕಲಕುವ ಮತದಾನದ ಸುದ್ದಿ. ತನ್ನ ತಂದೆ ಸಾವನ್ನಪ್ಪಿ ಮನೆಯವರೆಲ್ಲಾ ದುಖ ಸಾಗರದಲ್ಲಿ ಮುಳುಗಿದ್ದರೂ, ಇಲ್ಲೊಂಬ್ಬ ವೈದ್ಯ ಮಾತ್ರ, ತನ್ನ ಮತದಾನದ ಹಕ್ಕನ್ನು ಈ ಶೋಕ ಸಾಗರ ದಾಟಿ ಬಂದು ಚಲಾಯಿಸಿದ ಘಟನೆ, ಮಂಡ್ಯ ಜಿಲ್ಲಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಂ.ಎಸ್.ರವಿಕುಮಾರ್ ಹಾಗೂ ಅವರ ತಮ್ಮನ ಪತ್ನಿ ಸುಮ ಎಂಬುವರೇ ಇಂತಹ ಶೋಕದ ನಡುವೆಯೂ ಇಂದು ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಅಂದಹಾಗೇ, ಡಾ.ಎಂ.ಎಸ್.ರವಿಕುಮಾರ್ ಅವರ ತಂದೆ, ಎಂ.ಸಿ.ಸಿದ್ದಯ್ಯ ಅವರು ಮದ್ದೂರು ತಾಲ್ಲೂಕಿನ ಮಾದರಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರಾಗಿದ್ದವರು. ಇಂತಹ ಡಾ.ಎಂ.ಎಸ್.ರವಿಕುಮಾರ್ ತಂದೆ ಗುರುವಾರ ಮುಂಜಾನೆ ಅನಾರೋಗ್ಯದಿಂದ ಕೊನೆಯುಸಿರು ಎಳೆದಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ನಡೆಯುತ್ತಿದ್ದ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದ ಮೇಲೆ ಪರಿಣಾಮ ಬೀರಿತು.

ಇದನ್ನು ಮನಗಂಡ ಡಾ.ಎಂ.ಎಸ್.ರವಿಕುಮಾರ್, ಮತದಾನದ ಮಹತ್ವ ಅರಿತವರಾಗಿ, ಕೂಡಲೇ ಜನರನ್ನು ಜಾಗೃತಿಗೊಳಿಸಲು ಮುಂದಾದರು. ಇದಕ್ಕಾಗಿ ಅವರು ಮಾಡಿದ್ದು, ತಾವೇ ಸ್ವತಹ ಮುಂದೆ ಬಂದು ತಮ್ಮ ಜೊತೆಗೆ ತಮ್ಮನ ಪತ್ನಿ ಸುಮ ಎಂಬುವರನ್ನು ಕರೆತಂದು ಮತದಾನದ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು. ಈ ಮೂಲಕ ಗ್ರಾಮದಲ್ಲಿ ತಮ್ಮ ತಂದೆಯ ದುಖದ ಶೋಕ ಸಾಗರದಲ್ಲಿ ಜನರು ಮತದಾನ ಮಾಡದೇ ಹಿಂದೆ ಸರಿಯುತ್ತಿದ್ದವರನ್ನು ಹುರಿದುಂಬಿಸಿದರು.

ಒಟ್ಟಾರೆಯಾಗಿ ತಮ್ಮ ತಂದೆಯ ಸಾವಿನಿಂದಾಗಿ ಇಡೀ ಗ್ರಾಮವೇ ಮತದಾನದಿಂದ ದೂರ ಉಳಿಯುತ್ತಿದ್ದನ್ನು ಕಂಡ ಮಗ ಡಾ.ಎಂ.ಎಸ್.ರವಿಕುಮಾರ್ ಮಾಡಿದ ಒಂದು ಮತದಾನ, ಗ್ರಾಮದಲ್ಲಿನ ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಪ್ರೇರಣೆಯಾಗುವಂತೆ ಆಯ್ತು. ಅಲ್ಲದೇ ಮತದಾನ ನಡೆಯವುದೇ ಇಲ್ಲ. ಇಂದು ಮದ್ದೂರು ತಾಲ್ಲೂಕಿನ ಮಾದರಹಳ್ಳಿಯ ಮತಗಟ್ಟೆಯಲ್ಲಿ ಜೀರೋ ಮತದಾನ ಗ್ಯಾರಂಟಿ ಎನ್ನುತ್ತಿದ್ದವರಿಗೆ, ಅಚ್ಚರಿಯ ರೀತಿಯಲ್ಲಿ ಮತದಾನ ಮಾಡಲು ಪ್ರೇರೇಪಿಸಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions