ನನ್ನ ಮನೆಗೆ ಕೇಂದ್ರದ ಏಜೆನ್ಸಿಗಳು ಬಂದರೆ ಅವರಿಗೆ ಅಡುಗೆ ಮಾಡಿ ಬಡಿಸುತ್ತೇನೆ : ಮಮತಾ ಬ್ಯಾನರ್ಜಿ


Thursday, February 14th, 2019 1:50 pm

ನವದೆಹಲಿ : ಕೇಂದ್ರ ಸರಕಾರವು ಕೋಲ್ಕತಾದಲ್ಲಿರುವ ಕಾಳಿಘಾಟ್‌ನ ತನ್ನ ಮನೆಗೂ ಕೇಂದ್ರದ ಏಜೆನ್ಸಿಗಳನ್ನು ಕಳುಹಿಸಬಹುದು. ಆ ಅಧಿಕಾರಿಗಳಿಗೆ ನಾನು ಅಡುಗೆ ಮಾಡಿ ಬಡಿಸುತ್ತೇನೆ” ಎಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.

ಜಂತರ್ ಮಂತರ್‌ನಲ್ಲಿ ನಡೆದ ಸಮಾವೇಶದಲ್ಲಿ ಬುಧವಾರ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಈ ಹಿಂದೆ, ಸಿಬಿಐ ಅಧಿಕಾರಿಗಳು ಬಂಗಾಳದ ಭ್ರಷ್ಟಾಚಾರ ಕಳಂಕಿತ ಪೊಲೀಸ್ ಅಧಿಕಾರಿಯನ್ನು ವಿಚಾರಿಸಲು ತೆರಳಿದ್ದಾಗ, ‘ಕೈಗೆ ರಕ್ತ ಮೆತ್ತಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ಮಾತನಾಡುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ’ ಎಂದಿದ್ದರು ಮಮತಾ ಬ್ಯಾನರ್ಜಿ.

“ನಾಳೆ ನನ್ನ ಮನೆಗೂ ಅವರು ಸಿಬಿಐ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಅವಾಗ ನಿಮಗೆ ಮನೆಯಡುಗೆ ಮಾಡಿ ಹಾಕುತ್ತೇನೆ ಅಂತ ನಾನವರಿಗೆ ಹೇಳುವೆ. ವೆಜ್, ನಾನ್‌ವೆಜ್ ಅಥವಾ ರೋಟಿಯನ್ನು ಬೇಕಾದರೂ ಕೊಡುವೆ. ನಾನು ಹೆದರಿಲ್ಲ ಎಂಬುದನ್ನವರು ಮರೆತಿದ್ದಾರೆ. ನಾನೆಂದಿಗೂ ಹೆದರುವುದಿಲ್ಲ” ಎಂದರು ಬ್ಯಾನರ್ಜಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions