-->

ಮಮತಾ ಬ್ಯಾನರ್ಜಿ ಜೀವನಾಧಾರಿತ ಚಿತ್ರ ಬಿಡುಗಡೆಗೆ ಬಿಜೆಪಿ ಆಕ್ಷೇಪ


Thursday, April 18th, 2019 8:53 am

ಕೋಲ್ಕತ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಜೀವನಾಧಾರಿತ ಸಿನೆಮಾದ ಬಿಡುಗಡೆಯನ್ನು ಆಕ್ಷೇಪಿಸಿ ಭಾರತೀಯ ಜನತಾ ಪಕ್ಷ ಬುಧವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಮೋದಿ ಬಯೋಪಿಕ್‌ ಚಿತ್ರದ ಸಂದರ್ಭದಲ್ಲಿ ಕೈಗೊಳ್ಳಲಾದ ನಿರ್ಧಾರದಂತೆ ಮಮತಾ ಬ್ಯಾನರ್ಜಿ ಚಿತ್ರದ ಬಿಡುಗಡೆಗೆ ಮುನ್ನ ಚುನಾವಣಾ ಆಯೋಗ ಅದನ್ನು ವೀಕ್ಷಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಜಯ ಪ್ರಕಾಶ್‌ ಮಜುಮ್‌ದಾರ್‌ ತಮ್ಮ ದೂರು ಪತ್ರದಲ್ಲಿ ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಅಂದರೆ ಮೇ 3ರಂದು ಮಮತಾ ಬ್ಯಾನರ್ಜಿ ಅವರ ಹೋರಾಟದ ಬದುಕನ್ನು ಆಧರಿಸಿದ ಭಗಿನೀ ಎಂಬ ಹೆಸರಿನ ಬಂಗಾಲೀ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಾವು ಕೇವಲ ಮಮತಾ ಬ್ಯಾನರ್ಜಿ ಬದುಕಿನಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿರುವುದಾಗಿ ಹೇಳಿದ್ದಾರೆ. ಹಾಗಿದ್ದರೂ ಟಿಎಂಸಿ  ಅನೇಕ ಎದುರಾಳಿಗಳು ಈ ಚಿತ್ರ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಡುಗಡೆಯಾಗುವುದನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions