ಆಫೀಸ್‌ಗೆ ಹೋಗುತ್ತಿದ್ದರೆ ಈ ರೀತಿಯ ಮೇಕಪ್‌ ಮೂಲಕ ನಿಮ್ಮ ಲುಕ್‌ ಹೆಚ್ಚಿಸಿ


Thursday, June 14th, 2018 9:32 am


ಸ್ಪೇಷಲ್‌ ಡೆಸ್ಕ್‌ :  ಉದ್ಯೋಗ ಸ್ಥಳದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದರೆ ಕೇವಲ ಸುಂದರವಾಗಿರುವ ಉಡುಪುಗಳನ್ನು ಧರಿಸುವುದು ಮಾತ್ರವಲ್ಲ, ಬದಲಾಗಿ ಸೂಕ್ತವಾದ ಮತ್ತು ಕ್ಲಾಸಿಕ್ ಲುಕ್‌ನ ಮೇಕಪ್ ಮಾಡಿಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ.

ಹಾಗಂತ ತೀರಾ ಅತಿಯಾಗಿ ಮೇಕಪ್ ಮಾಡಿದರೂ ಅಂದ ಕೆಡುತ್ತದೆ. ಮೇಕಪ್ ಹಿತಮಿತವಾಗಿದ್ದರೆ ಉತ್ತಮ. ಉದ್ಯೋಗ ಸ್ಥಳದಲ್ಲಿ ಚೆನ್ನಾಗಿ ಮೇಕಪ್ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್.

ಚರ್ಮದ ರಂಧ್ರಗಳನ್ನು ಮುಚ್ಚಿ : ಮುಖವನ್ನು ಚೆನ್ನಾಗಿ ಕ್ಲೆನ್ಸಿಂಗ್ ಮಾಡಿದ ಬಳಿಕ ಪ್ರೈಮರ್ ಬಳಸಿ. ಇದರಿಂದ ಚರ್ಮದಲ್ಲಿ ಎದ್ದು ಕಾಣುವ ರಂಧ್ರಗಳು ಮುಚ್ಚಿ ಹೋಗುತ್ತವೆ.

ಮುಖವನ್ನು ತಿದ್ದಿ, ತೀಡಿ: ಮುಖಕ್ಕೆ ಫ್ಯಾಷನೆಬಲ್ ಸ್ಪರ್ಶ ಕೊಡಿ. ಅಂದರೆ, ಮೂರು ಬಣ್ಣಗಳ ಫೌಂಡೇಷನ್ ಬಳಸಿ. ತಿಳಿ ಬಣ್ಣವನ್ನು ಮುಖದ ಭಾಗವನ್ನು ಎದ್ದು ಕಾಣಲು ಬಳಸಿ, ಸಾಧಾರಣವಾದ ಬಣ್ಣವನ್ನು ಕೆನ್ನೆಗೆ ಬಳಸಿ ಮತ್ತು ಗಾಢ ಬಣ್ಣದ ಫೌಂಡೇಷನ್ ಅನ್ನು ಮುಖದ ಇಕ್ಕೆಲಗಳಿಗೆ ಬಳಸಿ. ಕೊನೆಗೆ ಸೂಕ್ತವಾದ ಮೇಕಪ್ ಬ್ರಷ್‌ನಿಂದ ಬಣ್ಣಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿ.

ಕನ್ಸೀಲರ್ ಬಳಕೆ: ಮುಖದಲ್ಲಿರುವ ಕಲೆ ಮತ್ತು ಚುಕ್ಕಿಗಳ ಮೇಲೆ ಚೆನ್ನಾಗಿರುವ ಕನ್ಸೀಲರ್ ಬಳಸಿ. ಬಳಿಕ ಇದರ ಅಂಚನ್ನು ನಯವಾಗಿ ಬ್ಲೆಂಡ್ ಮಾಡಿ.

ಹುಬ್ಬುಗಳ ಸೌಂದರ್ಯ: ಮೇಕಪ್ ಪರಿಪೂರ್ಣಗೊಳ್ಳಬೇಕಿದ್ದರೆ ಹುಬ್ಬುಗಳ ಸೌಂದರ್ಯಕ್ಕೂ ಗಮನ ನೀಡಿ. ತಿದ್ದಿ, ತೀಡಿದಂತಹ ಹುಬ್ಬು ಬೇಕಿದ್ದರೆ ಗಾಢ ಮತ್ತು ತಿಳಿ ಕಂದು ಬಣ್ಣದ ಪೆನ್ಸಿಲ್‌ನಿಂದ ಹುಬ್ಬನ್ನು ಲಘುವಾಗಿ ತೀಡಿ.

ಕಣ್ರೆಪ್ಪೆ ಆಕರ್ಷಕವಾಗಿರಲಿ: ಕಣ್ಣುಗಳ ರೆಪ್ಪೆಗಳು ಸುಂದರವಾಗಿ ಕಾಣಲು ತಿಳಿ ಕಂದು ಬಣ್ಣದ ಶಾಡೊ ಬಳಸಿ. ರೆಪ್ಪೆಯ ಕೆಳಗೆ ಶಾಡೊವನ್ನು ಸಪೂರವಾಗಿ ಹಚ್ಚಿ. ಐ ಶಾಡೊ ಬಳಸಿದ ಬಳಿಕ ಐಲೈನರ್ ಅಥವಾ ಕಾಡಿಗೆ ಬಳಸಬೇಡಿ. ಕರ್ಲರ್‌ನಿಂದ ಕಣ್ಣಿನ ರೆಪ್ಪೆಗಳನ್ನು ಗುಂಗುರನ್ನಾಗಿಸಿ ಬಳಿತ ರೆಪ್ಪೆಯ ಮೇಲ್ಭಾಗಕ್ಕೆ ಮಸ್ಕಾರ ಹಚ್ಚಿ. ಕೊನೆಯದಾಗಿ ಹುಬ್ಬಿನ ಮೂಳೆಗಳಿಗೆ ತಿಳಿಯಾದ ಬ್ರೊ ಹೈಲೈಟರ್‌ನ್ನು ಹಚ್ಚಿ.

ಬ್ಲಷ್ ಬಳಸಿ: ಕಿವಿಯ ಮಧ್ಯಭಾಗದಿಂದ ಆರಂಭಿಸಿ ಕೆನ್ನೆಯವರೆಗೆ ಚೆನ್ನಾಗಿರುವ ಬ್ಲಷ್ ಸವರಿ. ಪೀಚ್ ಬಣ್ಣದ ಬ್ಲಷ್ ತುಂಬಾ ಚೆನ್ನಾಗಿ ಕಾಣುತ್ತದೆ. ಮುಖಕ್ಕೆ ನೈಸರ್ಗಿಕ ಹೊಳಪು ಬೇಕಿದ್ದರೆ ಕೆನ್ನೆಗೆ ಹೈಲೈಟರ್‌ನ್ನು ಹಚ್ಚಿ.ತುಂಬಾ ಚೆನ್ನಾಗಿ ಕಾಣುತ್ತದೆ. ಮುಖಕ್ಕೆ ನೈಸರ್ಗಿಕ ಹೊಳಪು ಬೇಕಿದ್ದರೆ ಕೆನ್ನೆಗೆ ಹೈಲೈಟರ್‌ನ್ನು ಹಚ್ಚಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions