ಮಂಡ್ಯ ಲೋಕಸಭೆ ಉಪಚುನಾವಣೆ ಎಫೆಕ್ಟ್​​: ಅಂಬಿ ಕಟೌಟ್, ಪೋಸ್ಟರ್ ತೆರವು


Friday, October 12th, 2018 5:29 pm


ಮಂಡ್ಯ: ನಟ, ಮಾಜಿ ಸಚಿವ ಅಂಬರೀಶ್​ ಸಿನಿಮಾಗೂ ಲೋಕಸಭೆ ಉಪಚುನಾವಣೆ ಎಫೆಕ್ಟ್ ತಟ್ಟಿದೆ. ನಗರದಲ್ಲಿ ಹಾಕಲಾಗಿದ್ದ ಅಂಬರೀಶ್​ ಅವರ ಕಟೌಟ್, ಪೋಸ್ಟರ್ ಗಳನ್ನು ತೆರವುಗೊಳಿಸಲಾಗಿದೆ.

ನಗರದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಅಂಬರೀಶ್​ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಪ್ರದರ್ಶನ ನಡೆಯುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಂಬಿ ಕಟೌಟ್, ಪೋಸ್ಟರ್ ಗಳನ್ನು ರಾತ್ರೋರಾತ್ರಿ ಆಯೋಗದ ನಿರ್ದೇಶನದಂತೆ ತೆರವುಗೊಳಿಸಲಾಗಿದೆ.

ಸಿದ್ದಾರ್ಥ ಚಿತ್ರಮಂದಿರದಲ್ಲಿ ರಾರಾಜಿಸುತ್ತಿದ್ದ ಅಂಬಿ ಕಟೌಟ್ ಹಾಗೂ ಪೋಸ್ಟರ್ ಗಳನ್ನು ತೆರವು ಮಾಡಲಾಗಿದ್ದು, ಸಿನಿಮಾದ ಹೆಸರಿಗಾಗಿ ಕೇವಲ ಸುದೀಪ್ ಪೋಸ್ಟರ್ ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions