ಸುಭಾಷಿತ :

Saturday, October 19 , 2019 4:28 PM

ನಿಜವಾಗಿಯೂ ಲಿಚಿ ಹಣ್ಣು ಜೀವ ತೆಗೆಯುತ್ತದೆಯೇ? ಖಂಡಿತಾ ಇಲ್ಲ ಅದರಿಂದ ಹಲವು ಪ್ರಯೋಜನಗಳಿವೆ..


Thursday, June 20th, 2019 1:31 pm

ಸ್ಪೆಷಲ್ ಡೆಸ್ಕ್ : ಲಿಚಿ ಹಣ್ಣು ಹೆಸರು ಕೇಳಿದಾಗ ಈಗ ಜನರಿಗೆ ಭಯ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಕಾರಣ ಬಿಹಾರದಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡ ಮೆದುಳಿನ ಜ್ವರ ಮತ್ತು ಅದರಿಂದ ಉಂಟಾಗುತ್ತಿರುವ ಸಾವು. ಆದರೆ ನಿಜಕ್ಕೂ ಈ ಹಣ್ಣು ಜೀವಕ್ಕೆ ಹಾನಿಕಾರಕವೇ?

ಲಿಚಿ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಒಂದು ಹಣ್ಣು. ಇದರಿಂದ ತೂಕ ಇಳಿಕೆ, ತ್ವಚೆಯ ರಕ್ಷಣೆ, ಜೀರ್ಣಕ್ರಿಯೆಗೆ ಉತ್ತಮವಾಗಿದೆ.ಈ ಆದರೆ ಬಿಹಾರದಲ್ಲಿ ಈ ಹಣ್ಣನ್ನು ತಿಂದು ಜನ ಸಾವನ್ನಪ್ಪಲು ಪ್ರಮುಖ ಕಾರಣ ಎಂದರೆ ಪೋಷಕಾಂಶದ ಕೊರತೆ. ಪೋಷಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಲಿಚಿ ಹಣ್ಣು ತಿಂದಾಗ ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾಗಿ ಮೆದುಳು ಜ್ವರದಿಂದ ಸಾವನ್ನಪ್ಪುತ್ತಿದ್ದಾರೆ.

ಲಿಚಿ ಹಣ್ಣು ತಿಂದಾಗ ಅದರಲ್ಲಿರುವ ಎಂಸಿಪಿಜಿ ಎಂಬ ಟಾಕ್ಸಿನ್‌ ಪೌಷ್ಠಿಕ ಆಹಾರದ ಕೊರತೆ ಇರುವ ಮಕ್ಕಳ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುವುದು. ಆರೋಗ್ಯಕರ ಮಗು ತಿಂದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ,ಆದರೆ ಬಡ ಮಕ್ಕಳು ಮುಖ್ಯವಾಗಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಇದನ್ನು ತಿಂದರೆ ಬೇಗನೆ ಮೆದುಳು ಜ್ವರ ಕಾಣಿಸಿಕೊಳ್ಳುತ್ತದೆ.

  • ನಿಜವಾಗಿಯೂ ಈ ಹಣ್ಣಿನಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ…
    ಈ ಹಣ್ಣಿನಲ್ಲಿರುವ ಫೈಬರ್ ಅಂಶ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರ ಮೊದಲಾದ ಸಮಸ್ಯೆ ನಿವಾರಣೆಯಾಗುತ್ತದೆ.
  • ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದನ್ನು ಸೇವಿಸುವುದರಿಂದ ಇಮ್ಯೂನ್ ಸಿಸ್ಟಮ್ ಚೆನ್ನಾಗಿ ಆಗುತ್ತದೆ.
  • ಇದರಲ್ಲಿ ಒರ್ಗ್ಯಾನಿಕ್ ಕಾಂಪೌಂಡ್ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಸಮಸ್ಯೆ ನಿವಾರಣೆ ಆಗುತ್ತದೆ.
  • ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಇದೆ. ಇದು ದೇಹದಲ್ಲಿ ಫ್ಲ್ಯೂಯೇಡ್ ಅಂಶವನ್ನು ಬ್ಯಾಲೆನ್ಸ್ ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಸಹ ನಿವಾರಣೆಯಾಗುತ್ತದೆ.
  • ರಕ್ತ ಪರಿಚಲನೆ ಚೆನ್ನಾಗಿ ಆಗಲು ಈ ಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿರುವ ಕಾಪರ್ ಅಂಶ ಬ್ಲಡ್ ಸರ್ಕುಲೇಷನ್ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions