ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ! ಏನದು ಗೊತ್ತಾ?


Wednesday, May 23rd, 2018 7:20 am

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವ ಎಚ್. ಡಿ. ಕುಮಾರಸ್ವಾಮಿ ಅವರು ಚಿಕ್ಕಂದಿನಲ್ಲೇ ನಾಯಕತ್ವ ಮತ್ತು ಹೋರಾಟದ ಗುಣ ಮೈಗೂಡಿಸಿಕೊಂಡಿದ್ದರು ಎಂದು ಅವರ ಬಾಲ್ಯದ ಗೆಳೆಯ ಕೃಷ್ಣಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.

ಹೊಳೆನರಸೀಪುರ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಕುಮಾರಸ್ವಾಮಿ ಅವರು 1973-74 ರಲ್ಲಿ ಏಳನೇ ತರಗತಿ ನಾಯಕರಾಗಲು ಸಾಕಷ್ಟು ಹೋರಾಟ ನಡೆಸಿದ್ದರು ಎಂಬ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಕೃಷ್ಣಕುಮಾರ್ ಹೇಳಿದ್ದಾರೆ.

ಸಹ ವಿದ್ಯಾರ್ಥಿಯೊಬ್ಬ ಕ್ಲಾಸ್ ಲೀಡರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಪೈಟಿಂಗ್ ಹಂತಕ್ಕೆ ತಲುಪಿತ್ತು. ಈ ದೃಶ್ಯ ಕಂಡ ಸೇವಾದಳದ ಶಿಕ್ಷಕ ದಿ. ಬಸವರಾಜು ಇಬ್ಬರಿಗೂ ಬುದ್ಧಿ ಹೇಳಿದ್ದರು. ಕೊನೆಗೆ ಕುಮಾರಸ್ವಾಮಿಯೇ ಕ್ಲಾಸ್ ಲೀಡರ್ ಆದರು ಎಂದು ಕೃಷ್ಣಕುಮಾರ್ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದ ಸಾಲಗಾಮೆ ರಸ್ತೆಯಲ್ಲಿ ಸಂತ ಜೋಸೆಫರ್ ಪ್ರೌಢಶಾಲೆಗೆ ದಾಖಲಾಗಿದ್ದರು. ಕುಮಾರಸ್ವಾಮಿ ಜೊತೆಗೆ ಓದಿದ ಗೆಳೆಯರು ಇಂದಿಗೂ ಹಾಸನ, ಹೊಳೆನರಸೀಪುರದಲ್ಲಿ ಸಾಕಷ್ಟು ಜನ ಇದ್ದಾರೆ. ಅದರಲ್ಲಿ ಕೆಲವರು ಕುಮಾರಸ್ವಾಮಿ ಹೆಸರು ಹಿಡಿದು ಮಾತನಾಡಿಸುವಷ್ಟು ಆತ್ಮೀಯತೆ ಇಟ್ಟುಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions