ಸುಭಾಷಿತ :

Sunday, January 26 , 2020 4:18 AM

KSRTC ಬಸ್ ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 5,827 ಪ್ರಯಾಣಿಕರಿಂದ 7 ಲಕ್ಷದ 56 ಸಾವಿರದ 661 ದಂಡ ವಸೂಲಿ


Wednesday, July 17th, 2019 9:02 pm


ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜ್ಯದ ವಿವಿಧ ಬಸ್ ಗಳನ್ನು ತಪಾಸಣೆಗೆ ತನಿಖಾ ತಂಡಗಳಿಂದ ಒಳಪಡಿಸಿ, ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಟಿಕೆಟ್ ಇಲ್ಲದೇ ಪ್ರಾಯಣಿಸುತ್ತಿದ್ದ 5 ಸಾವಿರದ 827 ಪ್ರಯಾಣಿಕರಿಂದ 7 ಲಕ್ಷದ 56 ಸಾವಿರದ 661 ರೂಪಾಯಿ ದಂಡವನ್ನು ವಸೂಲಿ ಮಾಡಿದೆ.

ಜೂನ್ 2019ರ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಾ ಕಾರ್ಯವನ್ನು ಚುರುಕು ಗೊಳಿಸಿ, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 42 ಸಾವಿರದ 469 ವಾಹನಗಳನ್ನು ತನಿಖೆಗೊಳಪಡಿಸಿದೆ. ಈ ವೇಳೆ 4 ಸಾವಿರದ 673 ಪ್ರಕರಣದಗಳನ್ನು ಪತ್ತೆ ಹಚ್ಚಿದ ತನಿಖಾ ತಂಡವರು, ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 5 ಸಾವಿರದ 827 ಪ್ರಯಾಣಿಕರಿಂದ 7 ಲಕ್ಷದ 56 ಸಾವಿರದ 661 ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ.

ಇನ್ನೂ ನಿಗಮದ ಆದಾಯ ಸೋರಿಕೆಯ ಬಗ್ಗೆಯೂ ತನಿಖೆ ನಡೆಸಿರುವ ಕೆಎಸ್ ಆರ್ ಟಿಸಿ, ಆದಾಯ ಸೋರಿಕೆ ಆಗುತ್ತಿದ್ದನ್ನು ತಡೆದು, 99 ಸಾವಿರದ 570 ರೂಪಾಯಿಗಳ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಈ ಪ್ರಕರದಲ್ಲಿ ಭಾಗಿಯಾದಿದ್ದ ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions