ಸುಭಾಷಿತ :

Sunday, January 26 , 2020 4:19 AM

ಬ್ರೇಕಿಂಗ್ : ಶಾಸಕ ಶ್ರೀಮಂತ ಪಾಟೀಲ್ ಎಸ್ಕೇಫ್ ಪ್ರಕರಣ : ನಗರ ಪೊಲೀಸ್ ಆಯುಕ್ತರಿಗೆ ಕೆಪಿಸಿಸಿ ದೂರು


Thursday, July 18th, 2019 6:50 pm

ಬೆಂಗಳೂರು : ಕಾಂಗ್ರೆಸ್ ನ ಕಾಗವಾಡ ಶಾಸಕರ ಶ್ರೀಮಂತ ಪಾಟೀಲ್ ಹೋಟೆಲ್ ನಿಂದ ರಾತ್ರೋರಾತ್ರಿ ಎಸ್ಕೇಫ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಕಾಂಗ್ರೆಸ್ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಿದೆ. ಈ ಮೂಲಕ ಶಾಸಕರ ಶ್ರೀಮಂತ ಪಾಟೀಲ್ ಪ್ರಕರಣ ಪೊಲೀಸರ ತನಿಖೆಯತ್ತ ತಿರುವು ಪಡೆದುಕೊಂಡಿದೆ.

ವಿಧಾನಮಂಡಲದಲ್ಲಿ ಇಂದು ವಿಶ್ವಾಸಮತ ಸಾಭೀತು ಪಡಿಸುವ ಕುರಿತಂತೆ ಇಂದು ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಈ ಬಳಿಕ ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಸದನದಲ್ಲಿ ಹೊಸ ಬಾಂಬ್ ಸಿಡಿಸಿದರು.

ಇದಾದ ಬಳಿಕ ಕಾಂಗ್ರೆಸ್ ನ ಪ್ರೀಯಾಂಕ್ ಖರ್ಗೆ, ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯ ಲಕ್ಷ್ಮಣ್ ಸವದಿಯವರು ಏರ್ ಪೋರ್ಟ್ ನಲ್ಲಿ ಭೇಟಿ ಮಾಡಿ, ಕರೆದೊಯ್ಯುವ ಬಗ್ಗೆ ಚರ್ಚೆ ನಡೆಸುತ್ತಿರುವ ಪೋಟೋಗಳನ್ನು ಪ್ರದರ್ಶಿಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಮೂಲಕ ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಸಾಕ್ಷಿಯಾಯಿತು.

ವಿಧಾನಮಂಡಲದ ಅಧಿವೇಶನ ಗದ್ದಲ ಕೋಲಾಹಲದ ಮೂಲಕ ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಲ್ಪಟ್ಟರೇ, ಇತ್ತ ಕಾಂಗ್ರೆಸ್ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ, ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಿಕೊಂಡು ಹೋಗಲಾಗಿದೆ. ಇಂದು ವಿಪ್ ಜಾರಿಯಾಗಿದ್ದರೂ ಅವರು ಸದನಕ್ಕೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಡುವಂತೆ ದೂರು ಸಲ್ಲಿಸಿದೆ. ಈ ಮೂಲಕ ಇದೀಗ ಶ್ರೀಮಂತ ಪಾಟೀಲ್ ಪ್ರಕರಣ ಪೊಲೀಸರ ತನಿಖೆಯತ್ತ ಸಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions