ಸುಭಾಷಿತ :

Monday, September 23 , 2019 3:53 PM

`ಮಹಾನಟಿ ಕೀರ್ತಿ ಸುರೇಶ್’ ಬಿಜೆಪಿಗೆ ಸೇರ್ಪಡೆ!?


Monday, May 13th, 2019 12:37 pm

ನ್ಯೂಸ್ ಡೆಸ್ಕ್ : ಟಾಲಿವುಡ್, ಕಾಲಿವುಡ್ ಗಳಲ್ಲಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಈ ವೇಳೆ ಬಿಜೆಪಿ ಸೇರಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್, ತನ್ನ ಪತಿ ಬಿಜೆಪಿಯಲ್ಲಿದ್ದಾರೆ. ಆದರೆ ನನಗೆ ಮತ್ತು ಕೀರ್ತಿಗೆ ಬಿಜೆಪಿಯಲ್ಲಿ ಸದಸ್ಯತ್ವ ಇಲ್ಲ, ಬಿಜೆಪಿ ಪರವಾಗಿ ಕೀರ್ತಿ ಪ್ರಚಾರ ಮಾಡಿದ್ದು ನಿಜ. ಆದರೆ ಕೀರ್ತಿ ಸುರೇಶ್ ಗೆ ರಾಜಕೀಯದ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ.  ಬಿಜೆಪಿ ಪರವಾಗಿ ನಾನು, ಕೀರ್ತಿ ಲೋಕಸಭೆ ಚುನಾವಣೆ ಭಾಗವಾಗಿ ದೆಹಲಿಯಲ್ಲಿ ಪ್ರಚಾರ ಮಾಡಿದ್ದಾಗಿ ಮೇನಕಾ ಸುರೇಶ್ ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions