ಸುಭಾಷಿತ :

Saturday, October 19 , 2019 4:38 PM

ವರ್ಗಾವಣೆಯಾಗಿ ತಿಂಗಳಾದರೂ ‘ಹಳೇ ಠಾಣೆ’ಯಲ್ಲೇ ಕೆಲಸ : ಇದು ಆಗಸ್ಟ್.9ರಂದು ವರ್ಗಾವಣೆಯಾಗಿದ್ದ 89 ‘ಪೊಲೀಸ್ ಪೇದೆ’ಗಳ ನೋವಿನ ಕಥೆ.!


Tuesday, September 17th, 2019 6:34 am

ಬೆಂಗಳೂರು : ಅತ್ತ ವರ್ಗಾವಣೆಯೂ ಇಲ್ಲ.. ಇತ್ತ ಕೆಲಸದಿಂದ ಬಿಡುಗಡೆಯೂ ಇಲ್ಲ. ಕೊನೆಗೆ ನೆರೆ ಸಂತ್ರಸ್ತ ನನ್ನವ್ವ, ನನ್ನಪ್ಪನ ನೆರವಿಗೆ ಧಾವಿಸೋಣವೆಂದ್ರೇ ರಜೆಯೂ ಸಿಗದ ಪರಿಸ್ಥಿತಿ. ಇದು ಮತ್ತಾರದ್ದೂ ಅಲ್ಲ.. ಆಗಸ್ಟ್ 9ರಂದು ವರ್ಗಾವಣೆಯಾದ 89 ಪೊಲೀಸ್ ಪೇದೆಗಳ ನೋವಿನ ಕತೆ. ವರ್ಗಾವಣೆಯಾಗಿ ತಿಂಗಳಾದರೂ ಹಳೇ ಠಾಣೆಯಲ್ಲೇ ಕೆಲಸ ಮಾಡುತ್ತಿರುವವರ ವ್ಯಥೆ.

ಕಳೆದ ಆಗಸ್ಟ್ 9ರಂದು 89 ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡಲಾಗಿತ್ತು. ನೆರೆ ಪೀಡಿತ ಜಿಲ್ಲೆಗಳಿಗೆ ಅನೇಕ ಪೊಲೀಸರು ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಮೂಲಕ ನೆರೆ ಪೀಡಿತ ಪ್ರದೇಶಗಳ ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಮಾಡಿ ಹೊರಟು ನಿಂತಿದ್ದರು.

ಇನ್ನೂ ಕೆಲವು ಪೇದೆಗಳು ನೆರೆ ಪೀಡಿದ ಪ್ರದೇಶದವರಾಗಿದ್ದರಿಂದ, ಊರಿಗೆ ಸಮೀಪಕ್ಕೆ ತೆರಳಿದರೇ ತನ್ನ ತಂದೆ-ತಾಯಿಗಳಿಗೆ ನೆರವಾಗಬಹುದೆಂಬ ಕಾರಣಕ್ಕಾಗಿಯೇ ವರ್ಗಾವಣೆ ಮಾಡಿಸಿಕೊಂಡು ತೆರಳಲು ಹೊರಟಿದ್ದರು. ಇಂತವರ ಆಸೆಗೆ ರಾಜ್ಯ ಸರ್ಕಾರ ಆಗಸ್ಟ್.9ರಂದು 89 ಪೊಲೀಸ್ ಪೇದೆಗಳನ್ನು ಕೂಡ ವರ್ಗಾವಣೆ ಮಾಡಿತ್ತು.

ಆದರೇ ದುರಾದೃಷ್ಠವೆಂಬಂತೆ, ಇದುವರೆಗೆ ವರ್ಗಾವಣೆ ಮಾಡಿಲ್ಲ. ಕಾರಣ, ಹಳೆಯ ಪೊಲೀಸ್ ಠಾಣೆಯಿಂದ ಇವರನ್ನು ಬಿಡುಗಡೆಗೊಳಿಸಿಲ್ಲ. ಹೀಗೆ ಬಿಡುಗಡೆಗೊಳಿಸದೇ ವರ್ಗಾವಣೆಗೊಂಡ ಠಾಣೆಗೆ ತೆರಳಿ ರಿಪೋರ್ಟ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅನೇಕ ಪೊಲೀಸ್ ಪೇದೆಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ನೆರೆ ಪೀಡಿತ ಜಿಲ್ಲೆಗಳ ಪೊಲೀಸರ ಬಗ್ಗೆ ಹೀಗೇಕೆ ಮಲತಾಯಿ ಧೋರಣೆ ಎಂಬುದಾಗಿ ಆಕ್ರೋಶವನ್ನೂ ವ್ಯಕ್ತ ಪಡಿಸಿದ್ದಾರೆ.

ಅಂದಹಾಗೇ, ಸಮಸ್ಯೆ ನಿವಾರಿಸಿ ಎಂದು ರಾಜ್ಯದ ಡಿಜಿಯವರನ್ನು ಭೇಟಿ ಮಾಡಿ, ಪೊಲೀಸ್ ಪೇದೆಗಳು ಮನವಿ ಸಲ್ಲಿಸಿದ್ದಾರೆ. ಡಿಜಿಯವರು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೇ ಇದುವರೆಗೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಡಿಜೆ ಮಾತಿಗೆ ಕ್ಯಾರೆ ಎಂದಿಲ್ಲ.

ಇದೇ ಕಾರಣದಿಂದಾಗಿ ರಾಮಗರ, ಬೆಂಗಳೂರು ಗ್ರಾಮಾಂತರ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ, ನೆರೆ ಪೀಡಿತ ಜಿಲ್ಲೆಗಳಾದ ಹಾವೇರಿ, ರಾಯಚೂರು ಸೇರಿದಂತೆ ಉತ್ತರಕರ್ನಾಟಕ ಪ್ರದೇಶಗಳಿಗೆ ವರ್ಗಾವಣೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ವರ್ಗಾವಣೆಗೊಂಡು ವರ್ಗಾವಣೆಯಾಗದೇ 89 ಪೊಲೀಸ್ ಪೇದೆಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಅಲ್ಲಾ ಮಾನ್ಯ ಮುಖ್ಯಮಂತ್ರಿಗಳೇ, ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳೇ, ಗೃಹಸಚಿವರೇ ಹೀಗೆ ಮಾಡುವುದೇ ಸರಿಯೇ..? ವರ್ಗಾವಣೆಯನ್ನು ಈ ಸಂಪತ್ತಿಗೆ ಯಾಕಾದರೂ ಮಾಡಬೇಕಿತ್ತು.? ನಮ್ಮ ಕಣ್ಣೀರಿನ ಕಷ್ಟವನ್ನು ಬಗೆಹರಿಸಿ, ಕಷ್ಟದಲ್ಲಿ ನೊಂದಿರುವ ನನ್ನ ಪೋಷಕರ ನೆರವಿಗೆ ಧಾವಿಸಲು ಸಮಸ್ಯೆ ಪರಿಹರಿಸಿಕೊಡಿ ಎಂಬುದು ನೊಂದ ಪೊಲೀಸ್ ಪೇದೆಗಳ ಅಳಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಾ, ಉತ್ತರ ಕರ್ನಾಟಕದ ನೆರೆ ಪೀಡಿತ ಪೊಲೀಸ್ ಪೇದೆಗಳಿಗೆ ರಿಲೀಫ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions