ಸುಭಾಷಿತ :

Tuesday, September 17 , 2019 6:59 AM

-->

ಪೊಲೀಸರಿಗೆ ಸಿಹಿ ಸುದ್ದಿ: ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ಪರಿಷ್ಕರಣೆಗೆ ‘ರಾಜ್ಯ ಸರಕಾರದಿಂದ ಆದೇಶ’


Saturday, September 14th, 2019 10:52 am

ಬೆಂಗಳೂರು : ರಾಜ್ಯ ಪೊಲೀಸರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪೊಲೀಸ್ ಇಲಾಖೆಯ ಕೆಲವೊಂದು ವರ್ಗದ ಹುದ್ದೆಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಪರಿಷ್ಕೃತ ವೇತನ ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರಾಘವೇಂದ್ರ ಔರಾದ್ಕರ್ ವರದಿಯಂತೆ ಪೊಲೀಸರ ವೇತನ ಶ್ರೇಣಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಹಣಕಾಸು ಇಲಾಖೆ ಸಹ ಹಸಿರು ನಿಶಾನೆ ತೋರಿಸಿ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಯಾವ ಹುದ್ದೆಗೆ ಎಷ್ಟು ವೇತನ ನಿಗದಿ ಮಾಡಬೇಕು ಎಂಬ ಬಗ್ಗೆ ಗೊಂದಲ ಇತ್ತು.

ಪೊಲೀಸ್ ಪೇದೆಗಳ ಸೇವಾ ಅವಧಿ ಮೇರೆಗೆ 2,100 ರೂ. ರಿಂದ 5,650 ರೂ. ವರೆಗೆ ಹೆಚ್ಚಳವಾಗಲಿದೆ. ಮುಖ್ಯ ಪೇದೆಗಳಿಗೆ 4,150 ರೂ. ಯಿಂದ 7,500 ರೂ.ವರೆಗೆ ಎಎಸ್ಐಗಳಿಗೆ 2,700 ರೂ.ಯಿಂದ 5,600 ರೂ. ಇನ್ಸ್ ಪೆಕ್ಟರ್ ಗೆ 2,200 ರೂ. 5,700 ರೂ. ವರೆಗೆ ಹಾಗೂ ನಾನ್ ಐಪಿಎಸ್ ಗಳಿಗೆ 1,650 ರೂ. ಯಿಂದ 2,500 ರೂ. ವರೆಗೆ ಹೆಚ್ಚಳ ಆಗಲಿದೆ ಎಂದು ಪಟ್ಟಿ ಸಮೇತ ಡಿಜಿಪಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಯಾರಿಗೆ ಎಷ್ಟು ಸಂಬಳ ಹೆಚ್ಚಳ

ಕಾನ್ ಸ್ಟೇಬಲ್/ರಿಸರ್ವ್ ಕಾನ್ ಸ್ಟೇಬಲ್-23,500 ರಿಂದ 47,650 ರೂ.

ಹೆಡ್ ಕಾನ್ ಸ್ಟೇಬಲ್-27,650 ರೂ. 52,650ರೂ.

ಸಹಾಯಕ ಸಬ್ ಇನ್ಸ್ ಪೆಕ್ಟರ್ -30,350 ರೂ.58,250 ರೂ.

ಪೊಲೀಸ್ ಇನ್ಸ್ ಪೆಕ್ಟರ್ -43,100 ರಿಂದ 83,900 ರೂ.

ಎಸ್.ಪಿ(ಐಪಿಎಸ್ ಅಲ್ಲದವರು)-70,850 ರೂ. 1,07,100 ರೂ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions