ಸುಭಾಷಿತ :

Saturday, October 19 , 2019 4:34 PM

ಬ್ರೇಕಿಂಗ್ : ಮುಂಬೈನಲ್ಲಿ ಅತೃಪ್ತ ಶಾಸಕರಿಂದ ಧಿಡೀರ್‌ ಸುದ್ದಿಗೋಷ್ಠಿ , ‘ಯಾವುದೇ ಕಾರಣಕ್ಕೂ ರಾಜೀನಾಮೆ ತೆಗೆದುಕೊಳ್ಳುವುದಿಲ್ಲ ಸ್ಪಷ್ಟನೆ’


Sunday, July 14th, 2019 5:46 pm


ಮುಂಬೈ : ಶಾಸಕ ಸುಧಾಕರ್‌ ಅವರು ಸದ್ಯ ನವದೆಹಲಿಯಲ್ಲಿದ್ದು, ಅವರು ಸದ್ಯದಲ್ಲೇ ನಮ್ಮನ್ನು ಸೇರಿಕೊಳ್ಳುತ್ತಾರೆಅಂತ ಮುಂಬೈನಲ್ಲಿರುವ ಶಾಸಕ  ಎಸ್‌.ಟಿ ಸೋಮಶೇಖರ್‌ ಹೇಳಿದರು. ಅವರು ಇಂದು ತಾವು ತಂಗಿರುವ ಹೋಟೆಲ್‌ನಲ್ಲಿ ಧಿಡೀರ್‌ ಮಾಧ್ಯಮಗೋಷ್ಠಿಯನ್ನು ನಡೆಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಎಂಟಿಬಿ ನಾಗರಾಜ್‌ ಸೇರಿದಂತೆ ಒಟ್ಟು 12 ಮಂದಿ ಹೋಟೆಲ್‌ ನಲ್ಲಿ ಇದ್ದೇವೆ ಅಂತ ಹೇಳಿದರು.

ಇದೇ ವೇಳೆ ಅವರು ಎಂಟಿಬಿ ನಾಗರಾಜ್‌ ನಮ್ಮೊಂದಿಗೆ ಹೋಟೆಲ್‌ನಲ್ಲಿ ಇರುವುದಕ್ಕೆ ನಮ್ಮನ್ನು ಮನವೊಲಿಸಲು ಅಲ್ಲ. ಬದಲಿಗೆ ಅವರು ನಮ್ಮೊಂದಿಗೆ ಇದ್ದೇವೆ. ನಾವೆಲ್ಲರು ಒಟ್ಟಿಗೆ ಇದ್ದೇವೆ. ಡಾ.ಸುಧಾಕರ್‌ ಅವರು ರಾಜೀನಾಮೆ ಕೊಟ್ಟಿದ್ದು, ಅವರು ರಾಜೀನಾಮೆ ನೀಡುವ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಅಂತ ಹೇಳಿದರು.

ಇನ್ನು ಇಬ್ಬರು ಪಕ್ಷೇತರ ಶಾಸಕು ಅವರದ್ದೇ ಅದ ತೀರ‍್ಮಾನವನ್ನು ತೆಗೆದುಕೊಳ್ಳುತ್ತಾರೆ ಅಂತ ಹೇಳಿದರು.  ಇದೇ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್‌ ಅವರು ನಿನ್ನೆ ರಾಜಕೀಯ ನೀಡುವ ಬಗ್ಗೆ ನೀಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಹೇಳಿದ್ದು, ಸುಧಾಕರ್‌ ಅವರು ಒಪ್ಪಿಕೊಂಡರೇ ಮಾತ್ರ ರಾಜೀನಾಮೆಯನ್ನು ತೆಗೆದುಕೊಳ್ಳುವುದರ ಬಗ್ಗೆ ಸ್ಪಷ್ಟನೆ ನೀಡಿದರು. ಇನ್ನು ಬಿಜೆಪಿ ಶಾಸಕ ಆರ್‌.ಆಶೋಕ್‌ ಅವರು ನಮ್ಮೊಂದಿಗೆ ಇಲ್ಲ, ಮುಂಬೈಗೆ ನಾನಾ ಕಾರಣಕ್ಕೆ ಹಲವು ಮಂದಿ ಬರುತ್ತಾರೆ. ಅವರು ಅದೇ ರೀತಿ ಬಂದಿರಬಹುದು ಅಂತ ಹೇಳಿದರು. ಕಾಂಗ್ರೆಸ್‌ ಪಕ್ಷದ ಯಾರೇ ನಮ್ಮನ್ನು ಮನವೊಲಿಸಿದರು ಕೂಡ ನಾವು ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಳ್ಳುವುದಿಲ್ಲ ಅಂತ ಹೇಳಿದರು. ‘ನಾವು ಬಿಜೆಪಿ ಸಂಪರ್ಕದಲ್ಲಿ ಇಲ್ಲ, ಯಾರನ್ನು ಭೇಟಿಯಾಗುವುದಿಲ್ಲ ಅಂತ ಹೇಳಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions