ಸುಭಾಷಿತ :

Sunday, January 26 , 2020 4:17 AM

ಬ್ರೇಕಿಂಗ್ ನ್ಯೂಸ್ : ಸದನದಲ್ಲಿ ಮುಗಿಯದ ವಿಶ್ವಾಸಮತ : ಸದನ ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಿಕೆ


Thursday, July 18th, 2019 6:24 pm

ಬೆಂಗಳೂರು : ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಶ್ರೀಮಂತ ಪಾಟೀಲ್ ಅವರನ್ನು ಎಸ್ಕೇಫ್ ಮಾಡಿಸಿದ ಬಿಜೆಪಿ ವಿರುದ್ಧ ಪೋಟೋ ತೋರಿಸಿ, ಗದ್ದಲ ಕೋಲಾಹಲ ನಡೆಸಿದ ಕಾರಣ, ಉಪಸಭಾಪತಿಗಳು ಸದನವನ್ನು ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಿದ್ದಾರೆ. ಈ ಮೂಲಕ ವಿಶ್ವಾಸಮತ ಸಾಭೀತು ಪ್ರಕ್ರಿಯೆ ನಾಳೆಯೂ ಮುಂದುವರೆಯಲಿದೆ.

ವಿಧಾನಮಂಡಲದ ಮಧ್ಯಾಹ್ನದ ಸದನ ಆರಂಭವಾಗುತ್ತಿದ್ದಂತೆ, ರಾಜ್ಯಪಾಲರ ಸಂದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನ ಹೆಚ್ ಕೆ ಪಾಟೀಲ್ ಇದು ಸರಿಯಲ್ಲ. ಅವರು ಗೌರವಯುತವಾಗಿ ನಡೆದುಕೊಳ್ಳುವಂತೆ ಕೈ ಮುಗಿದು ಬೇಡಿಕೊಂಡರು.

ಈ ಮಧ್ಯೆ ಅಡ್ವಕೇಟ್ ಜನರಲ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಲು ತೆರಳುತ್ತಿದ್ದಂತೆ, ಉಪಸಭಾಪತಿಯವರು ಕಲಾಪವನ್ನು ಮುಂದುವರೆಸಿದರು. ಈ ವೇಳೆ ಕಳೆದ ನಿನ್ನೆ ರಾತ್ರೋ ರಾತ್ರಿ ಎಸ್ಕೇಪ್ ಆಗಿರುವ ಶ್ರೀಮಂತ ಪಾಟೀಲ್ ಅವರು ಏರ್ಪೋರ್ಟ್ ಮೂಲಕ ತೆರಳುತ್ತಿರುವಾಗ ಲಕ್ಷ್ಮಣ್ ಸವದಿಯವರು ಭೇಟಿಯಾಗಿ ಕರೆದೊಯ್ಯುತ್ತಿರುವ ಪೋಟೋ ಉಪಸಭಾಪತಿಗೆ ತೋರಿಸಿದ ಪ್ರೀಯಾಂಕ್ ಖರ್ಗೆ, ಇದಕ್ಕೆ ಏನ್ ಉತ್ತರಿಸ್ತೀರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸದನದ ಭಾವಿಗೆ ಇಳಿದ ಕಾಂಗ್ರೆಸ್ ನಾಯಕರು, ಶಾಸಕರನ್ನು ಕಿಡ್ನಾಪ್ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿ, ಧಿಕ್ಕಾರ ಎಂದು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಎದ್ದ ಕಾರಣ, ಉಪಸಭಾಪತಿಗಳು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಆದರೇ ಮತ್ತೆ ಸದನ ಆರಂಭವಾದಾಗ ಗದ್ದಲ ಕೋಲಾಹಲವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಆರಂಭಿಸಿದ್ದರಿಂದ ಉಪಸಭಾಪತಿ ಸದನವನ್ನು ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions