ನಿರುದ್ಯೋಗಿಗಳಿಗೆ ‘ಭರ್ಜರಿ ಸಿಹಿ ಸುದ್ದಿ’ : ಕರ್ನಾಟಕ ವಿದ್ಯುತ್ ನಿಗಮದಿಂದ 3646 ಹುದ್ದೆಗಳಿಗೆ ಅರ್ಜಿ ಆಹ್ವಾನ


Saturday, February 23rd, 2019 11:56 am

ನ್ಯೂಸ್ ಡೆಸ್ಕ್ : ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 3646 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್) ಸೇರಿದಂತೆ ಇನ್ನು ಹಲವು ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

3646 ಹುದ್ದೆಗಳ ನೇಮಕಾತಿ ಹುದ್ದೆಗಳ ವಿವರ

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್)-94 ಹುದ್ದೆಗಳು

ಸಹಾಯಕ ಇಂಜಿನಿಯರ್ (ವಿದ್ಯುತ್)-505 ಹುದ್ದೆಗಳು

ಸಹಾಯಕ ಇಂಜಿನಿಯರ್ (ಸಿವಿಲ್)- 28 ಹುದ್ದೆಗಳು

ಕಿರಿಯ ಇಂಜಿನಿಯರ್ (ವಿದ್ಯುತ್)-570 ಹುದ್ದೆಗಳು

ಕಿರಿಯ ಇಂಜಿನಿಯರ್ (ಸಿವಿಲ್) -28 ಹುದ್ದೆಗಳು

ಕಿರಿಯ ಆಪ್ತ ಸಹಾಯಕ -63 ಹುದ್ದೆಗಳು

ಕಿರಿಯ ಸಹಾಯಕ – 360 ಹುದ್ದೆಗಳು

ಚಾಲಕ ದರ್ಜೆ -||- 126 ಹುದ್ದೆಗಳು

ಕಿರಿಯ ಸ್ಟೇಷನ್ ಪರಿಚಾರಕ-103 ಹುದ್ದೆಗಳು

ಕಿರಿಯ ಪವರ್ ಮ್ಯಾನ್ (ಕಿರಿಯ ಮಾರ್ಗದಾಳು)- 1769 ಹುದ್ದೆಗಳು

ಕವಿಪ್ರನಿನಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವೆಬ್ ಸೈಟ್ ಗಳ ಮುಖಾಂತರ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸುವುದು, ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಹೈದರಾಬಾದ್-ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರೆ ವಿವರಗಳು ಈ ಕೆಳಕಂಡ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತವೆ.

`www.kptcl.com.  www.bescom.rog, www.hescom.co.in, www.cescmysore.org, www.mesco.in, www.gescom.in.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions