ಇಂದು ರಾತ್ರಿಯಿಂದಲೇ ಜೆಟ್ ಏರ್ ವೇಸ್ ವಿಮಾನ ಹಾರಾಟ ಸ್ಥಗಿತ


Wednesday, April 17th, 2019 7:34 pm

ನವದೆಹಲಿ : ಜೆಟ್ ಏರ್ ವೇಸ್ ವಿಮಾನ ಸಂಸ್ಥೆಯ ವಿಮಾನಗಳ ಹಾರಾಟ ಇಂದಿನಿಂದಲೇ ಸ್ಥಗಿತಗೊಳ್ಳಲಿದೆ.  ಜೆಟ್ ಏರ್ ವೇಸ್ ವಿಮಾನ ಸಂಸ್ಥೆಗೆ ತುರ್ತಾಗಿ ಬೇಕಿದ್ದ 400 ಕೋಟಿ ಸಾಲ ಲಭ್ಯವಾಗದ ಹಿನ್ನೆಲೆ ಇಂದು ರಾತ್ರಿಯಿಂದಲೇ ಜೆಟ್ ಏರ್ ವೇಸ್ ವಿಮಾನಗಳು ಹಾರಾಟ ನಡೆಸುವುದಿಲ್ಲ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಗೆ ಹಣಕಾಸು ನೆರವು ನೀಡಲು ಯಾವುದೇ ಸರ್ಕಾರಿ ಬ್ಯಾಂಕು ಗಳಾಗಲಿ. ಕೇಂದ್ರ ಸರ್ಕಾರವಾಗಲಿ ಮುಂದೆ ಬರಲಿಲ್ಲ.  ಹಾಗಾಗಿ ಇಂದು ರಾತ್ರಿಯಿಂದಲೇ ತನ್ನ ಯಾವುದೇ ವಿಮಾನ ಹಾರುವುದಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ.

ಹಣಕಾಸು ಸಂಸ್ಥೆಗಳಿದ ಜೆಟ್ ಏರ್ ವೇಸ್ ಸಂಸ್ಥ ಒಟ್ಟಾರೆಯಾಗಿ 1,500 ಕೋಟಿ ಸಾಲ ಬೇಡಿತ್ತು. ಒಂದು ವೇಳೆ 1500 ಕೋಟಿ ಸಾಲ ನೀಡಿದರೂ ಕೂಡ ಅದು ಸುಸ್ಥಿತಿಗೆ ಬರುವುದು ಕಷ್ಟವಾಗಿತ್ತು. ಇನ್ನೂಇದರಿಂದ ಸುಮಾರು 16 ಸಾವಿರ ಉದ್ಯೋಗಿಗಳು ಕೆಲಸವಿಲ್ಲದೇ ಈಗ ಅತಂತ್ರವಾಗಿದ್ದಾರೆ. ಒಟ್ಟಿನಲ್ಲಿ ಇಂದು ರಾತ್ರಿಯಿಂದಲೇ ಜೆಟ್ ಏರ್ ವೇಸ್ ವಿಮಾನಗಳು ಹಾರಾಟ ನಡೆಸುವುದಿಲ್ಲ. ಸಂಸ್ಥೆ ಪ್ರಕಟಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions