BIG BREAKING : ಮಾರ್ಚ್ 31ಕ್ಕೆ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್-ಜೆಡಿಎಸ್ ‘ಲೋಕಾ ಸಮರ’ ಆರಂಭ


Tuesday, March 19th, 2019 2:52 pm

ಬೆಂಗಳೂರು : ಲೋಕಸಭಾ ಚುನಾವಣೆಯ ಸಿದ್ದತೆ ಸೇರಿದಂತೆ ಕಾಂಗ್ರೆಸ್ – ಜೆಡಿಎಸ್ ಪಕ್ಷದ ಉಭಯ ನಾಯಕರು ಇಂದು ಖಾಸಗೀ ಹೋಟೆಲ್ ನಲ್ಲಿ ಮಹತ್ವದ ಚರ್ಚೆ ನಡೆಸಿದರು. ಈ ಚರ್ಚೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾರ್ಚ್ 31ರಂದು ಮೈತ್ರಿ ಪಕ್ಷದ ನಾಯಕು ರಾಹುಲ್ ಗಾಂಧಿ ಮತ್ತು ದೇವೇಗೌಡರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ಒಟ್ಟಾಗಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಸಲಿವೆ ಎಂದು ತಿಳಿಸಿದರು.

ಖಾಸಗೀ ಹೋಟೆಲ್ ನ ಸಭೆಯ ಬಳಿಕ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಸಭೆಯ ಅಧ್ಯಕ್ಷ ಸಿದ್ದರಾಮಯ್ಯ, ಭಾರತೀಯ ಜನತಾ ಪಕ್ಷವನ್ನು ಲೋಕಸಭೆಯಲ್ಲಿ ಸಂಪೂರ್ಣವಾಗಿ ಸೋಲಿಸಬೇಕು. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಬಿಜೆಪಿಯಿಂದ ಸಾಧ್ಯವಿಲ್ಲ. ಜಾತ್ಯಾತೀತ ತತ್ವದ ಮತಗಳು ವಿಭಜನೆಯಾಗುತ್ತಿದ್ದರಿಂದ ಬಿಜೆಪಿಗೆ ಅನುಕೂಲ ಆಗುತ್ತಿತ್ತು. ಆದರೇ ಇದನ್ನು ಅರಿತ ನಾವುಗಳು ಒಟ್ಟಾರೆಯಾಗಿ ಈ ಬಾರಿ ಚುನಾವಣೆ ಎದುರಿಸುತ್ತಿದ್ದೇವೆ.

ಈಗಾಗಲೇ ಸೀಟುಗಳ ಹಂಚಿಕೆ ಆಗಿದೆ. ಅಭ್ಯರ್ಥಿಗಳ ಘೋಷಣೆ ಇನ್ನೆರಡು ದಿನಗಳಲ್ಲಿ ಆಗಲಿದೆ. ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರಿಗೆ, ಜೆಡಿಎಸ್-ಕಾಂಗ್ರೆಸ್ ಪಕ್ಷದಿಂದ ಕಟ್ಟು ನಿಟ್ಟಿನ ನಿರ್ದೇಶನ ಹೋಗಲಿದೆ. ಯಾವುದೇ ಸಣ್ಣ ಪುಟ್ಟ ತಪ್ಪುಗಳಿದ್ದರಿದ್ದರೂ ಅದನ್ನು ಸರಿದೂಗಿಸಿಕೊಂಡು ಹೋಗಲು ಸೂಚಿಸಲಾಗುತ್ತದೆ. ಬಿಜೆಪಿಯನ್ನು ಸೋಲಿಸುವುದೊಂದೆ ಮೈತ್ರಿಯ ಗುರಿ.

ದೇವೇಗೌಡರು ಅವರ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ಕೊಡೋದು ಒಂದು ಭಾಗ, ನಾವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ಕೊಡೋದು ಒಂದು ಭಾಗವಾಗಿ ಕೆಲಸ ಮಾಡಲಾಗುತ್ತದೆ. ಚುನಾವಣೆಯಲ್ಲಿ ವೀಕ್ಷಕರನ್ನು ಎರಡೂ ಪಕ್ಷಗಳಿಂದ ಒಬ್ಬಬರನ್ನು ನೇಮಕ ಮಾಡಲಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಕಾರ್ಯಕರ್ತರು ನಮ್ಮ ಇಂತಹ ನಿರ್ಧಾರವನ್ನು ಒಪ್ಪಿಕೊಂಡು ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಭಾವಿಸುತ್ತೇವೆ.

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಪ್ರಚಾರಕ್ಕೆ ಇಳಿಯಲಿದೆ. ಅದರಲ್ಲೂ ಒಟ್ಟಾಗಿ ಎರಡೂ ಪಕ್ಷಗಳೂ ಮಾರ್ಚ್ 31ರ ಒಳಗೆ ಬೆಂಗಳೂರಿನ ಆಸುಪಾಸಿದನಲ್ಲಿ ಒಟ್ಟಾಗಿ ಪ್ರಚಾರ ಸಮ್ಮೇಳನ ನಡೆಸಲಾಗುತ್ತದೆ. ಇದರಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಒಟ್ಟಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
31 ಮಾರ್ಚ್ 2019ರಂದು ಎರಡೂ ಪಕ್ಷಗಳ ನಾಯಕರ ಐತಿಹಾಸಿಕವಾದಂತ ಸಾರ್ವಜನಿಕ ಸಭೆ ನಡೆಯಲಿದೆ. ಇಲ್ಲಿಂದಲೇ ನಮ್ಮ ಚುನಾವಣಾ ರಣಕಹಣ ಆರಭವಾಗಲಿದೆ. ಇದು ರಾಷ್ಟ್ರಮಟ್ಟದ ವರೆಗೆ ತಲುಪಲಿ ಎಂಬುದೇ ನಮ್ಮ ಉದ್ದೇಶವಾಗಿದೆ.

ಒಟ್ಟಾರೆಯಾಗಿ 28 ಸ್ಥಾನಗಳನ್ನು ಗೆಲ್ಲಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಕೆಲಸ ಮಾಡಲು ತೊಡಗುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನಂತ್ರ ಮಾತನಾಡಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ದೇಶದ ಲೋಕಸಭೆ ಚುನಾವಣೆಗಳ ನಾಮಪತ್ರ ಸಲ್ಲಿಸಲು ಇವತ್ತು ಪ್ರಕ್ರಿಯೆ ಶುರುವಾಗಿದೆ. ಇದರ ಹಿನ್ನಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆ ನಂತ್ರ, ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ ಉದ್ದೇಶವೇ ಇವತ್ತು ಉತ್ತಮ ಆಡಳಿತ ಕೊಡುತ್ತಾ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ದೊಡ್ಡ ಸಂದೇಶ ಕೊಡಬೇಕು ಎಂಬುದಾಗಿದೆ.

28ಕ್ಕೆ 28 ಕ್ಷೇತ್ರಗಳನ್ನು ಜನತೆಯ ಆಶೀರ್ವಾದದೊಂದಿಗೆ ಈ ಒಂದು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ನೆನ್ನೆಯಷ್ಟೇ ಕಾಂಗ್ರೆಸ್ ನಾಯಕರು ಸೇರಿ ಚರ್ಚೆ ನಡೆಸಿದ್ದರು. ಇಂದು ಉಭಯ ಪಕ್ಷದ ನಾಯಕರು ಒಟ್ಟಾಗಿ ಚರ್ಚೆ ನಡೆಸಿದ್ದೇವೆ.

ಒಂದೆರಡು ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಇವುಗಳನ್ನು ಸರಿಪಡಿಸಲು ಸಿದ್ದರಾಮಯ್ಯ, ದೇವೇಗೌಡರು ಸಮರ್ಥರಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಹೇಳಿದಂತೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇವೇಗೌಡರ ಸಾರಥ್ಯದಲ್ಲಿ ಐತಿಹಾಸಿಕ ಸಮಾವೇಶ ಮಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದು ಮಾರ್ಚ್ 31ರಂದು ಜರುಗಲಿದೆ.

ಮೈತ್ರಿಯೊಂದಿಗೆ 28 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸದೊಂದಿಗೆ ಹೆಜ್ಜೆ ಇಡುತ್ತಿದ್ದೇವೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವನ್ನು ಒಟ್ಟಾರೆಯಾಗಿ ಸೇರಿ ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತನಾಡಿ, ಈಗಾಗಲೇ ಮಾಜಿ ಮುಖ್ಯಮಂತ್ರಿಗಳು, ಸಮನ್ವಯ ಸಮಿತಿಯ ಅಧ್ಯಕ್ಷರು ಸಿದ್ದರಾಮಯ್ಯ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಇಂದು ಉಭಯ ನಾಯಕರು ಸಭೆ ಸೇರಿದ್ದೇವೆ.

ಮೊದಲ ಹಂತದ ಚುನಾವಣೆ 18ರಂದು ನಡೆಯಲಿದೆ. ಹೀಗಾಗಿ ಕಾಲ ಇರೋದು ಬಲು ಕಡಿಮೆ. ಮಾ.31ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಅದಕ್ಕೆ ವ್ಯವಸ್ಥೆ ಮಾಡುವುದು ಒಂದು ಕಡೆಯಾದರೇ, ಮೈತ್ರಿ ಪಕ್ಷಗಳು ಜೊತೆಗೆ ಸೇರಿದಂತೆ ಕಾರ್ಯಕರ್ತರನ್ನು ಒಂದು ಮಾಡಿ ಮುನ್ನೆಡೆಯುವ ತಯಾರಿ ಬಗ್ಗೆ ಚರ್ಚೆ ಮಾಡಲಾಗಿದೆ.

ಆದರೂ ಕೆಲವು ಸಣ್ಣ ಪುಟ್ಟ ವೈಮನಸ್ಸುಗಳು ಏನು ಇದ್ದಾವೆ. ಅವುಗಳನ್ನು ಶಮನ ಮಾಡುವ ಕೆಲಸ ಮಾಡಲಾಗುತ್ತದೆ. ಕೆಲ ಕ್ಷೇತ್ರಗಳಲ್ಲಿ ಸ್ಪರ್ಧೆಯ ಬಗ್ಗೆ ಗೊಂದಲವಿದೆ. ವೈಮನ್ನು ಇದೆ. ಅವುಗಳನ್ನು ಸರಿ ಪಡಿಸಲಾಗುತ್ತದೆ. ಇಲ್ಲಿಂದ ಎರಡೂ ಪಕ್ಷ ಎಲ್ಲಾ ಮಟ್ಟದ ನಾಯಕರು ಜಗಳ ಮಾಡುವುದಾಗಲೀ, ಮೈಮನಸ್ಸು ಮಾಡಿಕೊಂಡು ಗಲಾಟೆ ಮಾಡಿಕೊಳ್ಳುವುದಾಗಲಿ ಮಾಡಬಾರದು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರು, ಸಚಿವರು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಒಟ್ಟಾಗಿ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಪರಿಶ್ರಮಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸಿದರು.

ಇದೇ ವೇಳೆ ದೇವೇಗೌಡರು ಎಲ್ಲಿ ಸ್ಪರ್ಧೆ ನಡೆಸಲಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗ ಉತ್ತರಿಸಿದ ದೇವೇಗೌಡರು, ಸ್ಪರ್ಧೆಯ ಬಗ್ಗೆ ನನಗೆ ವೈಯಕ್ತಿಕವಾಗಿ ಸ್ವಾತಂತ್ರ್ಯವಿದೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ ಎಂಬ ಬಗ್ಗೆ ಕೆಲವೇ ದಿನಗಳಲ್ಲಿ ನಿಮಗೆ ತಿಳಿಸುತ್ತೇನೆ.

ಈ ವಿಚಾರವಾಗಿ, ಉಭಯ ಪಕ್ಷದ ನಾಯಕರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಕಾಯಿರಿ. ಜೆಡಿಎಸ್ ನಿಂದ ತುಮಕೂರಿನಲ್ಲಿ ಸ್ಪರ್ಧಿಸುವ ಬಗ್ಗೆಯೂ ಮಾತನಾಡಿದ ಅವರು, ಆ ಬಗ್ಗೆ ಇನ್ನೂ ಚರ್ಚೆ ನಡೆಸಿ ಮುಂದೆ ಹೆಜ್ಜೆ ಇಡಲಾಗುತ್ತದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ತಿಳಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions