‘ಜಯಲಲಿತಾ’ ಬಯೋಪಿಕ್ ನಲ್ಲಿ ಯಾರಾಗಲಿದ್ದಾರೆ ‘ಅಮ್ಮಾ’..?


Sunday, August 19th, 2018 6:08 pm

ಸಿನಿಮಾ ಡೆಸ್ಕ್ :  ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ದೇಶ ಕಂಡ ಪ್ರಭಾವಿ ರಾಜಕಾರಣಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್​ 2019ರಲ್ಲಿ ರಿಲೀಸ್​ ಆಗಲಿದೆ.

ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಏನಪ್ಪ ಅಂದ್ರೆ, ಬಯೋಪಿಕ್ ಚಿತ್ರದಲ್ಲಿ ಜಯಲಲಿತಾ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವುದು. ಹೌದು, ಬಯೋಪಿಕ್ ಚಿತ್ರದಲ್ಲಿ ಜಯಲಲಿತಾ ಪಾತ್ರಕ್ಕೆ ಹಲವು ನಟಿಯರ ಹೆಸರು ಕೇಳಿ ಬರುತ್ತಿದ್ದು, ಯಾರಾಗ್ತಾರೆ ಎನ್ನುವುದು ಕುತೂಹಲ.

ನಟಿ ನಯನಾತಾರಾ, ಬಹುಭಾಷಾ ನಟಿ ತ್ರಿಷಾ ಹಾಗೂ ವಿದ್ಯಾಬಾಲನ್ ಅವರ ಹೆಸರು ಕೇಳಿ ಬರುತ್ತಿದೆ. ಈ ಮೂವರು ನಟಿಯರಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡ್ತಾರೆ ಎಂಬುದು ಕ್ಯುರಿಯಾಸಿಟಿ ಹುಟ್ಟಿಸಿದೆ. ಜಯಾ ಅವರ ಬಯೋಪಿಕ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ.ಇನ್ನು ಈ ಚಿತ್ರವನ್ನು ಪ್ರಶಸ್ತಿ ವಿಜೇತ ತೆಲುಗು ನಿರ್ದೇಶಕ ವಿಜಯ್ ಅವರು ನಿರ್ದೇಶಿಸಲಿದ್ದಾರೆ.ಜಯಲಲಿತ ಅವರ ಹುಟ್ಟು ಹಬ್ಬದ ದಿನ ಚಿತ್ರಕ್ಕೆ ಚಾಲನೆ ಸಿಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions