ಸದಾಶಿವ ಬ್ರಹ್ಮಾವರ್ ನಿಧನಕ್ಕೆ ಕಂಬನಿ ಮಿಡಿದ ನಟ ಜಗ್ಗೇಶ್
Thursday, September 20th, 2018 9:55 pm
ನ್ಯೂಸ್ ಡೆಸ್ಕ್: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿನ್ನೆ ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಸದಾಶಿವ ಬ್ರಹ್ಮಾವರ್ ಸಾವಿನ ಸುದ್ದಿ ಕೇಳಿದ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ, ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವಟರ್ ಖಾತೆಯಲ್ಲಿ ದುಃಖವನ್ನು ಹಂಚಿಕೊಂಡಿದ್ದಾರೆ.
“ನಾನುಕಂಡ ಅತಿ ಸೌಮ್ಯಸ್ವಭಾವದ ವ್ಯೆಕ್ತಿ 1988ರಿಂದ ಇವರ ಜೊತೆ ನಟಿಸಿರುವೆ. ಲಿಫ್ಟ್ ಕೊಡಲಾ ನನ್ನ ಜೊತೆ ಇವರ ಕಡೆಚಿತ್ರ!ಅವರ ಒಳ್ಳೆಗುಣಕ್ಕೆ ವಯಸ್ಸುಮಾಗಿದಾಗ ಭುಜಕೊಡದ ಮಹನೀಯರಿದ್ದರು ದೌರ್ಭಾಗ್ಯ!ಪರದೆ ಮೇಲಿರುವವರೆಗು ಮಾತ್ರ ಕಲಾವಿದರ ಬದುಕು!ಮಿಕ್ಕಂತೆ ನೆನಪು ಮಾತ್ರ”ಬಣ್ಣಮಾಸುವ ಮುನ್ನ ಬದುಕು ಬಲವಾಗಿಟ್ಟುಕೊಳ್ಳಿ ಕಲಾಬಂಧುಗಳೆ.ನಶ್ವರ ಜಗ RIP.” ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.