ಸುಭಾಷಿತ :

Saturday, October 19 , 2019 4:28 PM

ಆದಾಯ ತೆರಿಗೆ ಪಾವತಿದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ : ನಿಮ್ಮ ರಿಟರ್ನ್ಸ್ ಸಲ್ಲಿಸದಿದ್ದರೆ `ಇ-ವೇ ಬಿಲ್’ ನಿಷೇಧ : ಹಣಕಾಸು ಇಲಾಖೆ


Thursday, April 25th, 2019 8:40 am

ನವದೆಹಲಿ : ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯ ಇ ವೇ ಬಿಲ್ ಪಾವತಿದಾರರು ಎರಡು ತಿಂಗಳು ತೆರಿಗೆ ಸಲ್ಲಿಸದಿದ್ದರೆ ಇ ವೇ ಬಿಲ್ ಗಳನ್ನು ಮಾಡುವುದಕ್ಕೆ ನಿರ್ಬಂಧಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಕಾಲದಲ್ಲಿ ಇ ವೇ ಬಿಲ್ ಸಲ್ಲಿಕೆ ಆಗದಿದ್ದಲ್ಲಿ ಸರಕು ರವಾನೆದಾರ,ಸರಕು ಸ್ವೀಕಾರದಾರ,ಸಾಗಾಣೆದಾರ, ಇ-ಕಾಮರ್ಸ್ ನಿರ್ವಾಹಕ, ಕೊರಿಯರ್ ಏಜೆನ್ಸಿ ಸೇರಿದಂತೆ ಇತರೆ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ವಿದ್ಯುನ್ಮಾನ ಹಾಗೂ ಇ-ವೇಬಿಲ್ ಸೇವಾ ವ್ಯವಸ್ಥೆ ನಿಷೇಧವಾಗಲಿದೆ ಎಂದು ನೇರ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ ತಿಳಿಸಿದೆ.

ನಿಯಮಗಳ ಅನುಸಾರ, ತೆರಿಗೆದಾರರು ಜಿಎಸ್ ಟಿಯ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ನಡೆಸುವ ಬಿಸಿನೆಸ್ ಗಳಿಗೆ ಸಂಬಂಧಿಸಿದ ಸತತ ಎರಡು ಫೈಲಿಂಗ್ ಅವಧಿಗೆ ಜಿಎಸ್ ಟಿ ರಿಟರ್ನ್ ಸಲ್ಲಿಸದಿದ್ದರೆ, ನಂತರ ಅಂಥ ಉದ್ಯಮಿಗಳಿಗೆ ಇ ವೇ ಬಿಲ್ ಸೃಷ್ಠಿಸಲು ನಿಷೇಧ ಇರುತ್ತದೆ. ಹೀಗಾಗಿ ವ್ಯಾಪಾರಿಗಳು ಹಿಂದಿನ ಮಾಸಿಕದ ತೆರಿಗೆಯನ್ನು ಮುಂದಿನ ತಿಂಗಳು 20 ರೊಳಗೆ ಪಾವತಿಸಬೇಕು. ತ್ರೈಮಾಸಿಕದ ಆದಾಯ ತೆರಿಗೆಯನ್ನು ಸೂಚಿತ ತಿಂಗಳ 18 ರೊಳಗೆ ಸಲ್ಲಿಸುವಂತೆ ಎಚ್ಚರಿಕೆ ನೀಡಿದೆ.

ಒಂದೇ ಇ ವೇ ಬಿಲ್ ಇಟ್ಟುಕೊಂಡು ಕೆಲವು ಸಾಗಣೆದಾರರು ಎರಡು ಮೂರು ಸಲ ನಾನಾ ಸರಕುಗಳನ್ನು ಸಾಗಣೆ ಮಾಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸಿಬಿಐಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions