ಸುಭಾಷಿತ :

Monday, September 23 , 2019 3:55 PM

ವಿಶ್ವಕಪ್​ಗೆ ಬರಬೇಡಿ, ಬಂದ್ರೆ, ಜೈಲೇ ಗತಿ: ಫಿಕ್ಸರ್​ಗಳಿಗೆ ಐಸಿಸಿ ಎಚ್ಚರಿಕೆ


Monday, May 20th, 2019 8:01 am

ಲಂಡನ್ : ಶಂಕಿತ ಫಿಕ್ಸರ್​ಗಳು ಯಾರೂ ವಿಶ್ವಕಪ್​ಗೆ ಬರಬೇಡಿ, ಇಂಗ್ಲೆಂಡ್​ಗೆ ಬಂದು ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದು ಗೊತ್ತಾದಲ್ಲಿ ಜೈಲೇ ಗತಿ ಎಂದು ಎಚ್ಚರಿಸಿದೆ.  ಇದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಭಾಗವಹಿಸಲಿರುವ 10 ತಂಡಗಳಿಗೂ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳನ್ನು ನೇಮಿಸುವಂತೆ ಐಸಿಸಿ ಸೂಚಿಸಿದೆ.

ಆಯಾ ತಂಡಗಳಲ್ಲಿರುವ 10 ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ಘಟಕವನ್ನೂ ವಿಶ್ವಕಪ್​ಗಾಗಿ ಐಸಿಸಿ ಆರಂಭಿಸಿದ್ದು, ಇಬ್ಬರು ಅಗ್ರ ತನಿಖಾಧಿಕಾರಿಗಳು ಹಾಗೂ ಇನ್ನೊಬ್ಬ ಸಾಕ್ಷ್ಯ ವಿಶ್ಲೇಷಕ ಇರಲಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ 2011ರ ಫೈನಲ್ ಪಂದ್ಯವೇ ವಿಶ್ವದಲ್ಲಿ 220 ಕೋಟಿ ಪ್ರೇಕ್ಷಕರಿಂದ ವೀಕ್ಷಣೆಗೆ ಒಳಗಾಗಿತ್ತು. ಇಂಥ ಮಹತ್ವದ ಟೂರ್ನಿಯ ವೇಳೆ ಫಿಕ್ಸಿಂಗ್​ನಂಥ ಯಾವುದೇ ಘಟನೆಗಳು ವರದಿ ಕೂಡ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions